ನವದೆಹಲಿ: ಕುಟುಂಬವೊಂದು ಹಾಲ್ ನಲ್ಲಿ ನೆಮ್ಮದಿಯಾಗಿ ಕುಳಿತುಕೊಂಡು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಫ್ಯಾನ್ ಕೆಳಗೆ ಬಿದ್ದಿದ್ದು, ಮನೆ ಮಂದಿ ಭಾರೀ ಅವಘಡದಿಂದ ಪಾರಾದ ಘಟನೆ ನಡೆದಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬುದು ವರದಿಯಾಗಿಲ್ಲ ಆದರೆ ಫ್ಯಾನ್ ಬೀಳುವ ವೀಡಿಯೋ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
1 ಸೆಕೆಂಡ್ ಇರುವ ವೀಡಿಯೋದಲ್ಲಿ ವಿಯೇಟ್ನಾಂ ಮೂಲದ ಕುಟುಂಬವೊಂದು ಒಟ್ಟಾಗಿ ಕುಳಿತು ಊಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಪತಿ, ಪತ್ನಿ ಹಾಗೂ ತಮ್ಮ ಮಕ್ಕಳು ಮಾತನಾಡುತ್ತಾ ಊಟ ಮಾಡುತ್ತಿದ್ದಾಗ ಫ್ಯಾನ್ ಏಕಾಏಕಿ ಪತಿ ಹಾಗೂ ಮಗುವಿನ ಮೇಲೆ ಬೀಳುತ್ತದೆ. ಇದರಿಂದ ಇಡೀ ಕುಟುಂಬ ಗಾಬರಿಗೊಳಗಾಗುತ್ತದೆ. ಅಲ್ಲದೆ ಮಹಿಳೆ ಕೂಡಲೇ ಎದ್ದು ಮಗನ ಎಳೆದುಕೊಂಡು ಕೈ, ತಲೆ ಉಜ್ಜುತ್ತಾರೆ. ಇತ್ತ ವ್ಯಕ್ತಿ ಬಿದ್ದ ಫ್ಯಾನ್ ಅನ್ನು ಪಕ್ಕದಲ್ಲಿ ಇಡುತ್ತಾರೆ. ಆದರೆ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಇದನ್ನೂ ಓದಿ: ಯೋಗಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ – ಉದ್ದವ್ ವಿರುದ್ಧ ದೂರು
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಹಲವಾರು ಕಾಮೆಂಟ್ ಗಳು ಬರುತ್ತಿದೆ. ಹಲವರು ಗ್ರೇಟ್ ಎಸ್ಕೇಪ್ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅದೃಷ್ಟವಂತ ಫ್ಯಾಮಿಲಿ ಎಂದಿದ್ದಾರೆ. ಒಟ್ಟಿನಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾದ ಕುಟುಂಬ ನೋಡಿ ಜನ ಸಂತಸಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ