ವಾಷಿಂಗ್ಟನ್: ಹಣ ಸಾಗಿಸುತ್ತಿದ್ದ ಸಂದರ್ಭದಲ್ಲಿ ಟ್ರಕ್ ವಾಹನದಿಂದ ಜಾರಿ ಬಿದ್ದ ಕಂತೆ ಕಂತೆ ಹಣ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹಾರಿದ ಘಟನೆ ಅಮೆರಿಕಾದ ಜಾರ್ಜಿಯಾದ ಅಟ್ಲಾಂಟಾ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಟ್ರಕ್ ನಲ್ಲಿ ಹಣವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಹಣ ಚೆಲ್ಲಾ ಪಿಲ್ಲಿಯಾಗಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಶಸ್ತ್ರ ಸಜ್ಜಿತ ಟ್ರಕ್‍ನ ಬಾಗಿಲು ಏಕಾಏಕಿ ತೆರೆದುಕೊಂಡಿದ್ದು, ಪರಿಣಾಮ ಟ್ರಕ್‍ನಲ್ಲಿದ್ದ ಸುಮಾರು 1 ಲಕ್ಷ ಡಾಲರ್ ಮೊತ್ತದ ಹಣ ರಸ್ತೆಯಲ್ಲಿ ಬಿದ್ದಿದೆ.
Advertisement
Dunwoody Police tell me it is possible well over $100,000 in cash covered 285 West last night after a door on an armored truck came open. If you picked up any of the cash police are asking you to return it or you could be charged with theft. https://t.co/H5PaYx5nkP #11Alive pic.twitter.com/WY9gWzRj1n
— Joe Henke (@JoeHenke) July 10, 2019
Advertisement
ಟ್ರಕ್ ನಿಂದ ಹಣ ಜಾರಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗುತ್ತಿದ್ದಂತೆ ಹಿಂಬದಿಯಲ್ಲಿ ಬರುತ್ತಿದ್ದ ಸುಮಾರು 15 ಕಾರುಗಳ ಜನರು ರಸ್ತೆ ಬದಿ ವಾಹನ ನಿಲ್ಲಿಸಿ ಹಣ ಸಂಗ್ರಹಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಹಲವು ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.
Advertisement
Advertisement
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರು ಸುಮಾರು 1 ಲಕ್ಷ ಡಾಲರ್ ಹಣ ಮಿಸ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ, ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ನೀಡಿ, ಜನರ ಭಾವನೆ ನಮಗೆ ಅರ್ಥವಾಗುತ್ತದೆ. ಆದರೆ ಹಣ ತೆಗೆದುಕೊಂಡು ಹೋಗಿರುವ ಜನರು ಅದನ್ನು ಹಿಂದಿರುಗಿಸಬೇಕು. ಇಲ್ಲವಾದರೆ ಕಳ್ಳತನ ಆರೋಪದ ಅಡಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
If you grabbed any of the money that spilled on I-285, you may want to return it ASAP. Dunwoody police investigators have seen the video shared on social media and will be working to identify drivers from their tag numbers. https://t.co/JYeVLa795y pic.twitter.com/lOKWw9naUO
— Atlanta Journal-Constitution (@ajc) July 10, 2019