ಭುವನೇಶ್ವರ: ಒಡಿಶಾದ ರಾಯ್ ಗಢ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಳಿ ಕಾಣದೆ ರೈಲೊಂದು ಮಳೆ ನೀರಿನಲ್ಲಿ ಸಿಲುಕಿಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಭುವನೇಶ್ವರ್- ಜಗ್ದಾಲ್ ಪುರ್ ಹಿರಾಖಂಡ್ ಎಕ್ಸ್ ಪ್ರೆಸ್ ಮಳೆ ನೀರಿನಲ್ಲಿ ಸಿಲುಕಿಕೊಂಡಿದೆ. ರೈಲು ನೀರಿನಲ್ಲಿ ಸಿಲುಕಿ ಚಲಿಸಲು ಪರದಾಡುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದೆ.
ವಿಡಿಯೋದಲ್ಲೇನಿದೆ?:
ಭಾರೀ ಮಳೆಯ ಪರಿಣಾಮ ರೈಲ್ವೇ ಹಳಿಯ ಮೇಲೆಯೇ ನೀರು ಹರಿದುಹೋಗುತ್ತಿದ್ದು, ಈ ಘಟನೆಯನ್ನು ನೋಡಲು ಸುತ್ತಮುತ್ತಲಿನ ಜನ ಛತ್ರಿ ಹಿಡಿದುಕೊಂಡು ನೋಡುತ್ತಿರುವುದು ಕಾಣಬಹುದು. ಈ ವೇಳೆ ಅದೇ ಸಮಯಕ್ಕೆ ರೈಲೊಂದು ಬಂದಿದ್ದು, ಹಳಿ ಕಾಣದೆ ಮುಂದೆ ಹೋಗಲು ಅಸಾಧ್ಯವಾಗಿ ಪರದಾಡಿದೆ.
#WATCH Bhubaneswar-Jagdalpur Hirakhand Express gets stuck after rail tracks were submerged near a station in Rayagada district following heavy rain in the region. #Odisha (Source:Mobile footage) pic.twitter.com/uVUgrYUpd4
— ANI (@ANI) July 21, 2018
ಹಳಿಯಲ್ಲಿಯೇ ನೀರು ಹರಿಯುತ್ತಿದ್ದ ಪರಿಣಾಮ ಜಗದಲ್ ಪುರದಿಂದ ಭುವನೇಶ್ವರ್ ಗೆ ಹೋಗುವ ರೈಲನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಬದಲಿ ಮಾರ್ಗವಾಗಿ ಕೊರಪುಟ್ ನಿಂದ ಭುವನೇಶ್ವರ್ ಗೆ ಹೋಗುವಂತೆ ಸೂಚಿಸಲಾಗಿದೆ.
ಒಡಿಶಾದ ರಾಯ್ ಗಢ್ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣಿ ನದಿ ನಡುಗಡ್ಡೆಯಾಗಿದೆ. ಪರಿಣಾಮ ಪ್ರವಾಹ ರೈಲ್ವೇ ಹಳಿಯ ಮೇಲೆ ಹರಿದುಬಂದಿದೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದುದರಿಂದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸುವಂತೆ ಹಾಗೂ ಈ ಬಗ್ಗೆ ಎಚ್ಚರಿಕೆ ನೀಡುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಲ್ಲಿನ ಸರ್ಕಾರ ಸೂಚಿಸಿದೆ. ರಾಜ್ಯದ ಮಲ್ಕಾಂಗರಿ, ಕಂಧಮಾಲ್ ಹಾಗೂ ಗಜಪತಿ ಜಿಲ್ಲೆಗಳು ಪ್ರವಾಹಕ್ಕೀಡಾಗಿವೆ.