ಡೆಹ್ರಾಡೂನ್: ಉತ್ತರಾಖಂಡ್‍ನ ವಿಷ್ಣುಪ್ರಯಾಗ ಬಳಿ ಭಾರೀ ಭೂಕುಸಿತ ಸಂಭವಿಸಿ ಸಾವಿರಾರು ಯಾತ್ರಿಕರು ಸಂಕಷ್ಟದಲ್ಲಿ ಸಿಲುಕಿದ ಬೆನ್ನಲ್ಲೇ ಅತ್ತ ಹರಿದ್ವಾರದಲ್ಲಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಹೋಗುತ್ತಿರುವ ಗೋವೊಂದನ್ನು ರಕ್ಷಣೆ ಮಾಡಲಾಗಿದೆ.
ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಗೋವು ಅಪಾಯದಿಂದ ಪಾರಾಗಲು ಕಷ್ಟಪಡುತ್ತಿರೋ ದೃಶ್ಯ ಮನಕಲಕುವಂತಿದೆ. ಗೋವು ನೀರಿನಲ್ಲಿ ಒದ್ದಾಡುತ್ತಿರೋ ಮಾಹಿತಿ ತಿಳಿದ ತಕ್ಷಣವೇ ರಾಜ್ಯ ವಿಪತ್ತು ತಂಡ ಸ್ಥಳಕ್ಕಾಗಮಿಸಿ ಗೋವಿಗೆ ಹಗ್ಗ ಕಟ್ಟುವ ಮೂಲಕ ಸುರಕ್ಷಿತವಾಗಿ ದಡ ಸೇರಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
Advertisement
ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಬಳಿ ಭಾರೀ ಭೂ ಕುಸಿತ ಸಂಭವಿಸಿದ್ದ ರಿಷಿಕೇಶ್ ಹಾಗೂ ಬದರೀನಾಥ್ ಸಂಪರ್ಕ ಕಲ್ಪಿಸುವ ಹೈವೇಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಕನ್ನಡಿಗರು ಸೇರಿದಂತೆ ಸಾವಿರಾರು ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದರು. ಹಾಥಿ ಪಹಾರ್ ಪರ್ವತದಿಂದ ಭಾರಿ ಗಾತ್ರದ ಬಂಡೆಗಳು ರಸ್ತೆಗೆ ಕುಸಿದು ಬಿದ್ದಿವೆ. ಚಮೋಲಿ ಜಿಲ್ಲೆಯ ಜೋಶಿ ಮಠದಿಂದ 5 ಕಿ.ಮೀ ದೂರದಲ್ಲಿ ಈ ಅನಾಹುತ ನಡೆದಿತ್ತು. ಜೋಶಿಮಠ, ಕರ್ಣಪ್ರಯಾಗ, ಪೀಪಲ್‍ಕೋಟಿ, ಗೋವಿಂದಘಾಟ್ ಮತ್ತು ಬದರಿನಾಥದಲ್ಲಿ ಯಾತ್ರಿಕರು ಸಿಲುಕಿದ್ದರು.