ಮುಂಬೈ: 2023ರ ಏಕದಿನ ವಿಶ್ವಕಪ್ (World Cup 2023) ಕ್ರಿಕೆಟ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರರಂತೆ ಅಜೇಯ ಓಟ ಮುಂದುವರಿಸಿರುವ ಟೀಂ ಇಂಡಿಯಾ (Team India) ಪ್ರಸಕ್ತ ವರ್ಷದಲ್ಲಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 357 ರನ್ ಬಾರಿಸಿದ ಭಾರತ ಎದುರಾಳಿ ಲಂಕಾ ತಂಡವನ್ನು ಕೇವಲ 55 ರನ್‌ಗಳಿಗೆ ಕಟ್ಟಿಹಾಕಿ 302 ರನ್‌ಗಳ ದಾಖಲೆಯ ಜಯ ಸಾಧಿಸಿತು.
View this post on Instagram
Advertisement
ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದ ಬಳಿಕ ಶ್ರೇಯಸ್ ಅಯ್ಯರ್ (Shreyas Iyer) ಅವರಿಗೆ ಫಿಲ್ಡಿಂಗ್‍ಗಾಗಿ ತಂಡದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಂದ ಪದಕ ಪಡೆದರು. ಇದೇ ವೇಳೆ ರವೀಂದ್ರ ಜಡೇಜಾ ಅವರ ಫೀಲ್ಡಿಂಗ್ ಪ್ರಯತ್ನಗಳಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ ದಿಲೀಪ್ ʻಸೈಲೆಂಟ್ ಸ್ನೈಪರ್ʼಎಂಬ ಬಿರುದನ್ನೂ ನೀಡಿದರು.
Advertisement
ಶ್ರೇಯಸ್ ಅಯ್ಯರ್‌ಗೆ ಸರ್ಪ್ರೈಸ್ ಕೊಟ್ಟ ಲೆಜೆಂಡ್: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಉತ್ತೇಜನ ನೀಡಲು ಡ್ರೆಸ್ಸಿಂಗ್ ರೂಮ್‌ನಲ್ಲಿ ಹೊಸ ಕಾನ್ಸೆಪ್ಟ್ ಮಾಡಿರುವ ತಂಡ ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಆಟಗಾರರಿಗೆ ಪದಕಗಳನ್ನು ನೀಡಿ ಹುರಿದುಂಬಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಉತ್ತಮ ಫೀಲ್ಡಿಂಗ್ ಪ್ರದರ್ಶನಕ್ಕಾಗಿ ಡ್ರೆಸ್ಸಿಂಗ್ ರೂಮ್ ಚುಟುಕು ಸಮಾರಂಭದಲ್ಲಿ ಚಿನ್ನದ ಪದಕ ನೀಡಲಾಗಿತ್ತು. ಈ ಬಾರಿ ಶ್ರೇಯಸ್ ಅಯ್ಯರ್ ಅವರಿಗೆ ಉತ್ತಮ ಫೀಲ್ಡಿಂಗ್‌ಗಾಗಿ ಗೋಲ್ಡ್ ಮೆಡಲ್ ನೀಡಲಾಯಿತು.
Advertisement
Advertisement
ವಿಶೇಷವೆಂದರೆ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಲು ಟೀಂ ಇಂಡಿಯಾ ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ಆಹ್ವಾನಿಸಿತ್ತು. ಭಾರತೀಯ ಕ್ರಿಕೆಟ್ ಲೋಕದ ಲೆಜೆಂಡ್ ಎಂದೇ ಗುರುತಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು ವರ್ಚುಲ್‌ನಲ್ಲಿ ಪ್ರಶಸ್ತಿಗೆ ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಪ್ರಕಟಿಸುವ ಮೂಲಕ ಇತರ ಆಟಗಾರರಿಗೂ ಸರ್ಪ್ರೈಸ್ ಕೊಟ್ಟರು. ಇದೇ ವೇಳೆ ಟೀಂ ಇಂಡಿಯಾ ಆಟಗಾರರನ್ನು ಶ್ಲಾಘಿಸಿದ ಸಚಿನ್ ದಕ್ಷಿಣ ಆಫ್ರಿಕಾದಲ್ಲಿ 2003ರ ವಿಶ್ವಕಪ್ ವೇಳೆ ಸಹಿ ಹಾಕುತ್ತಿದ್ದ ವಿಚಾರವನ್ನು ಬಹಿರಂಗ ಪಡಿಸಿದರು.
ಬಳಿಕ ಮಾತನಾಡುತ್ತಾ, ರೋಹಿತ್ ಹಿಂದಿನ ದಿನ ನನ್ನನ್ನು ಭೇಟಿಯಾಗಿ ಅತ್ಯುತ್ತಮ ಫೀಲ್ಡರ್ ಪದಕ ನೀಡುವ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಇದು ದಕ್ಷಿಣ ಆಫ್ರಿಕಾದಲ್ಲಿ 2003ರ ವಿಶ್ವಕಪ್ ಟೂರ್ನಿಯನ್ನು ನೆನಪಿಸಿತು, ಅಂದು ಟೂರ್ನಿ ಆರಂಭವಾಗುವುದಕ್ಕೂ ಮುನ್ನ ʻನಾನು ಮಾಡಬಹುದು, ನಾವೂ ಮಾಡಬಹುದುʼ ಎಂಬ ಘೋಷವಾಕ್ಯದೊಂದಿಗೆ ನಮ್ಮಲ್ಲೊಂದು ಚಾರ್ಟ್ ಇತ್ತು. ಪ್ರತಿಯೊಬ್ಬರು ಹೋಗುವ ಮುನ್ನ ಆ ಚಾರ್ಟ್‌ಗೆ ಸಹಿ ಹಾಕಬೇಕಿತ್ತು. ಇದು ನಮ್ಮಲ್ಲಿ ಬದ್ಧತೆಯ ಬಗ್ಗೆ ಮತ್ತು ದೇಶಕ್ಕಾಗಿ, ನನ್ನ ತಂಡಕ್ಕಾಗಿ 100% ಶ್ರಮ ಹಾಕುತ್ತೇನೆ ಎಂಬ ಸೂಚಕವಾಗಿತ್ತು. ಅದೇ ರೀತಿ ಈಗಲೂ ಫೀಲ್ಡಿಂಗ್ ಪದಕಗಳು ತಂಡದ ಬಗ್ಗೆ ನಿಮಗಿರುವ ಬದ್ಧತೆಯ ಪ್ರತಿಬಿಂಬವಾಗಿದೆ. ನಿಮ್ಮ ಸಹೋದ್ಯೋಗಿಗಾಗಿ, ನಿಮ್ಮ ತಂಡಕ್ಕಾಗಿ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬುದು ನಿಮ್ಮಲ್ಲಿರಬೇಕು. ನಾನು ಇಲ್ಲಿಯವರೆಗೆ ನೀವು ಆಡಿದ ಪಂದ್ಯಗಳನ್ನು ತುಂಬಾ ಇಷ್ಟಪಟ್ಟಿದ್ದೇನೆ. ಇದೇ ಫಾರ್ಮ್ ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಫೀಲ್ಡರ್ ಆಫ್ ದಿ ಮ್ಯಾಚ್ ಪದಕ ಪಡೆದಿದ್ದರು. ಚೊಚ್ಚಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಈ ಪದಕ ತನ್ನದಾಗಿಸಿಕೊಂಡಿದ್ದರು.
Web Stories