Monday, 20th August 2018

Recent News

ವಿಡಿಯೋ: ಎಲ್ಲರಿಗಿಂತ ಮುಂಚೆ ಮಾಜಿ ಗೆಳತಿಯ ಬರ್ತ್ ಡೇ ಆಚರಿಸಿದ ರಣ್‍ಬೀರ್

ನವದೆಹಲಿ: ಬಾಲಿವುಡ್‍ನ ಹ್ಯಾಂಡ್‍ಸಮ್ ರಣ್‍ಬೀರ್ ಕಪೂರ್ ತಮ್ಮ ಮಾಜಿ ಪ್ರೇಯಸಿ ಕತ್ರೀನಾ ಕೈಫ್ ಹುಟ್ಟುಹಬ್ಬವನ್ನು ಎಲ್ಲರಿಗಿಂತ ಮುಂಚೆ ಆಚರಿಸುವ ಮೂಲಕ ಗೆಳತಿಗೆ ಸರ್ ಪ್ರೈಸ್ ನೀಡಿದ್ದಾರೆ.

ಮಾಜಿ ಪ್ರೇಮಿಗಳಾದ ರಣ್‍ಬೀರ್ ಮತ್ತು ಕತ್ರೀನಾ ಕಾರಣಾಂತರಗಳಿಂದ ಬೇರೆ ಬೇರೆಯಾಗಿದ್ದಾರೆ. ಆದ್ರೆ ಸದ್ಯ ಇಬ್ಬರ ನಟನೆ `ಜಗ್ಗಾ ಜಾಸೂಸು’ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದ್ದು, ತಮ್ಮ ವಯಕ್ತಿಕ ಮುನಿಸುಗಳನ್ನು ಮರೆತು ಒಂದಾಗಿ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ.

ಸೋಮವಾರ ದೆಹಲಿಯಲ್ಲಿ ಸಿನಿಮಾ ಪ್ರಮೋಷನ್ ವೇಳೆ ರಣ್‍ಬೀರ್ ಹುಟ್ಟು ಹಬ್ಬವನ್ನು ಆಚರಿಸುವ ವಿಡಿಯೋವನ್ನು ಕತ್ರೀನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕತ್ರೀನಾಗಾಗಿ ವಿಶೇಷ ಕೇಕ್ ತರಿಸಿದ್ದು, ಕೇಕ್ ಕತ್ತರಿಸಿದ ಬಳಿಕ ರಣ್‍ಬೀರ್ ಬರ್ತ್ ಡೇ ಹಾಡು ಹಾಡುವುದನ್ನು ಕಾಣಬಹುದು. ಕತ್ರೀನಾ ಇದೇ ತಿಂಗಳು 16ರಂದು 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ರಣ್‍ಬೀರ್ ಕಪೂರ್‍ ಗೆ ಸಿಕ್ಕಳು ಹೊಸ ಗರ್ಲ್ ಫ್ರೆಂಡ್-ಯಾಕೋ ಅವಳು ಕತ್ರೀನಾಳಿಗೆ ಇಷ್ಟವಿಲ್ಲವಂತೆ!

ಬ್ರೇಕ್ ಅಪ್ ಬಳಿಕ ರಣ್‍ಬೀರ್ ಮತ್ತು ಕತ್ರೀನಾ ಮೊದಲ ಬಾರಿಗೆ `ಜಗ್ಗಾ ಜಾಸೂಸು’ ಸಿನಿಮಾದಲ್ಲಿ ನಟಿಸಿದ್ದು, ಈಗಾಗಲೇ ಸಿನಿಮಾ ಟ್ರೇಲರ್‍ನಿಂದ ಜನರ ಮೆಚ್ಚುಗೆಯನ್ನು ಗಳಿಸಿದೆ. ಸಿನಿಮಾ ಇದೇ ಜುಲೈ 14ರಂದು ತೆರೆಕಾಣಲಿದೆ.

 

😗😙😙 #jaggaandjughead 👫❤. #katrinakaif #ranbirkapoor #jaggajasoos #promotion #aboutyesterday

A post shared by ★ KATRINA KAIF DAILY ★ (@katrinakaifdaily) on

#jaggaandjughead 😂😂😘😘😘. #katrinakaif #ranbirkapoor #jaggajasoos #promotion #today #katrinakaifdaily @katrinakaif

A post shared by ★ KATRINA KAIF DAILY ★ (@katrinakaifdaily) on

#jaggaandjughead 9 days to go for #jaggajasoos 💃💃💃💃. #katrinakaif #ranbirkapoor #katrinakaifdaily

A post shared by ★ KATRINA KAIF DAILY ★ (@katrinakaifdaily) on

Close up 😍😍😍 #jaggaandjughead #katrinakaif #ranbirkapoor #katrinakaifdaily #abudhabi #jaggajasoos #promotion

A post shared by ★ KATRINA KAIF DAILY ★ (@katrinakaifdaily) on

Leave a Reply

Your email address will not be published. Required fields are marked *