ಕನ್ನಡದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಇದೀಗ ಮತ್ತೊಂದು ಬಾರಿ ವರ್ಲ್ಡ್ ಪ್ರೀಮಿಯರ್ ಗೆ ಸಿದ್ಧಗೊಂಡಿದೆ. ಇದು ಪುನೀತ್ ನಟನೆಯ ಕೊನೆ ಸಿನಿಮಾವಾಗಿದ್ದರಿಂದ ವಿಶೇಷ ರೀತಿಯಲ್ಲಿಯೇ ಜನರ ಮುಂದೆ ತರಲು ಸ್ಟಾರ್ ಸುವರ್ಣ ವಾಹಿನಿ ರೆಡಿಯಾಗಿದ್ದು, ಜುಲೈ 17ರಂದು ಸಂಜೆ 5.30ಕ್ಕೆ ಜೇಮ್ಸ್ ಪ್ರಸಾರವಾಗಲಿದೆ.
ಈಗಾಗಲೇ ಜೇಮ್ಸ್ ಸಿನಿಮಾವನ್ನು ಹಲವರು ನೋಡಿರಬಹುದು. ಆದರೆ, ಆ ಜೇಮ್ಸ್ ಗೂ ಈ ಜೇಮ್ಸಗೂ ವ್ಯತ್ಯಾಸವಿದೆಯಂತೆ. ಈಗಾಗಲೇ ಥಿಯೇಟರ್ ನಲ್ಲಿ ತೆರೆಕಂಡ ಜೇಮ್ಸ್ ಸಿನಿಮಾದಲ್ಲಿ ಅಪ್ಪು ಪಾತ್ರಕ್ಕೆ ಶಿವರಾಜ್ ಕುಮಾರ್ ಡಬ್ ಮಾಡಿದ್ದರೆ, ಆದರೆ, ಕಿರುತೆರೆಯಲ್ಲಿ ತೆರೆಕಾಣುತ್ತಿರುವ ಈ ಜೇಮ್ಸ್ ನಲ್ಲಿ ಸ್ವತಃ ಅಪ್ಪು ಅವರ ವಾಯ್ಸ್ ಅನ್ನೇ ಬಳಸಲಾಗಿದೆಯಂತೆ. ಹಾಗಾಗಿ ಈ ಸಿನಿಮಾ ಬೇರೆ ಲೋಕಕ್ಕೆ ನೋಡುಗರನ್ನು ಕರೆದುಕೊಂಡು ಹೋಗಲಿದೆಯಂತೆ. ಇದನ್ನೂ ಓದಿ:ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ
ಜೇಮ್ಸ್ ಸಿನಿಮಾ ಮಾರ್ಚ್ 17ಕ್ಕೆ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ನೂರಾರು ಕೋಟಿಗಳನ್ನು ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದಿತ್ತು. ಅಪ್ಪು ನಟನೆಯ ಕೊನೆ ಸಿನಿಮಾ ಇದಾಗಿದ್ದರಿಂದ, ಅಭಿಮಾನಿಗಳು ಚಿತ್ರವನ್ನು ಭಾವನಾತ್ಮಕವಾಗಿ ತಗೆದುಕೊಂಡಿದ್ದರು. ಮತ್ತೆ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.