ಬೀಜಿಂಗ್: ಚರಂಡಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿರುವ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಚೀನಾದ ಝೇಜಿಯಾಂಗ್ ಪ್ರಾಂತ್ಯದ ಕ್ಹುಝೋ ಎಂಬಲ್ಲಿ ಏಪ್ರಿಲ್ 30ರಂದು ಈ ಘಟನೆ ನಡೆದಿದೆ. ಕ್ಹುಝೋ ನಗರದಲ್ಲಿ ಅಂದು ಭಾರೀ ಮಳೆಯಾಗುತ್ತಿದ್ದ ವೇಳೆ ಸುಮಾರು 11 ವರ್ಷದ ಬಾಲಕ ನೋಡ ನೋಡುತ್ತಿದ್ದಂತೆ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
Advertisement
Advertisement
ಬಾಲಕ ಕೊಚ್ಚಿ ಹೋಗುವುದನ್ನು ನೋಡಿದ ಚಾಲಕರೊಬ್ಬರು ಕಾರನ್ನು ನಿಲ್ಲಿಸಿ ಆತನ ರಕ್ಷಣೆಗೆ ಮುಂದಾಗಿದ್ದಾರೆ. ಬಾಲಕ ಚರಂಡಿಯಲ್ಲಿ ಹೋಗುತ್ತಿದ್ದಂತೆ ದಾರಿಹೋಕರು ಸಹ ರಕ್ಷಣೆಗೆ ಮುಂದಾಗಿದ್ದಾರೆ.
Advertisement
ಬಾಲಕ ಅತಿ ವೇಗದಲ್ಲಿ ನೀರಿನ ರಭಸದೊಂದಿಗೆ ಹರಿದುಕೊಂಡು ಹೋಗ್ತಿದ್ದರು, ಛಲ ಬಿಡದ ಸ್ಥಳೀಯ ವ್ಯಕ್ತಿಯೊಬ್ಬ ಸ್ವಲ್ಪ ಮುಂದುಗಡೆ ಓಡಿ ಹೋಗಿ ಚರಂಡಿಗೆ ಇಳಿದು ಆತನನ್ನು ರಕ್ಷಿಸಿದ್ದಾರೆ.
Advertisement
ಈ ವಿಡಿಯೋ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ ಕೇವಲ 10 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವಿಡಿಯೋ ನೋಡಿದ ಎಲ್ಲರು ಬಾಲಕನನ್ನು ರಕ್ಷಿಸಿದ ಎಲ್ಲರಿಗೂ ಕಮೆಂಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
https://www.facebook.com/shanghaiist/videos/10156935319981030/