ಕರಾಚಿ: ಪಾಕಿಸ್ತಾನದ ಮೂಲದ ಖಾಸಗಿ ಮಾಧ್ಯಮದ ನಿರೂಪಕರಿಬ್ಬರು ಪರಸ್ಪರ ಜಗಳ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂಲಗಳ ಪ್ರಕಾರ ಲಾಹೋರ್ ಮೂಲದ ಖಾಸಗಿ ಮಾಧ್ಯಮದ ಆ್ಯಂಕರ್ ಗಳಾಗಿದ್ದು, ಪರಸ್ಪರ ಆಕ್ರೋಶ ವ್ಯಕ್ತಪಡಿಸಿ ಜಗಳವಾಡಿದ್ದಾರೆ.
ವಿಡಿಯೋದಲ್ಲಿರುವ ಮಹಿಳಾ ನಿರೂಪಕಿ ಮೂರ್ಖ ಎಂಬ ಪದವನ್ನ ಬಳಕೆ ಮಾಡುತ್ತಾಳೆ. ಇದರಿಂದ ಆಕ್ರೋಶಗೊಂಡ ನಿರೂಪಕ ಇಂತಹವರ ಜೊತೆ ನಾನು ಹೇಗೆ ಬುಲೆಟಿನ್ ಮಾಡಲಿ. ಈಕೆ ನನ್ನೊಂದಿಗೆ ಸರಿಯಾಗಿ ಮಾತನಾಡುವುದೇ ಇಲ್ಲ ಎಂದು ದೂರುತ್ತಾನೆ.
ನಿರೂಪಕರ ನಡುವಿನ ಈ ಬಿಸಿ ಜಗಳದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. ಈ ಹಿಂದೆಯೂ ಆನ್ ಸ್ಕ್ರೀನ್ ನಲ್ಲಿ ನಿರೂಪಕರ ನಡುವಿನ ಜಗಳ ಹೆಚ್ಚು ವೈರಲ್ ಆಗಿತ್ತು.
ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನ ನಿರೂಪಕಿಯೊಬ್ಬರು ತಮ್ಮ ಮಗಳನ್ನು ಕುರಿಸಿಕೊಂಡು ಸುದ್ದಿ ಓದುವ ಮೂಲಕ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
https://www.youtube.com/watch?time_continue=17&v=cmNaKHppdGA