ನವದೆಹಲಿ: ಇವತ್ತು ವಿಶ್ವ ತಾಯಂದಿರ ದಿನ ಈ ದಿನದ ಅಂಗವಾಗಿ ಬಾಲಿವುಡ್ ನಟ ಮತ್ತು ಮಾಡೆಲ್ ಮಿಲಿಂದ್ ಸೊಮಾನ್ ಅವರು ತನ್ನ 80 ವರ್ಷದ ತಾಯಿಗೆ ಪುಶ್ ಅಪ್ಸ್ ಮಾಡಿಸಿ ತಾಯಂದಿರ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ನಟ ಮಿಲಿಂದ್ ಅವರು ತನ್ನ ತಾಯಿ ಉಷಾ ಸೊಮಾನ್ ಅವರನ್ನು ಬೀಚ್‍ಗೆ ಕರೆದುಕೊಂಡು ಹೋಗಿ ಅಲ್ಲಿ ತನ್ನ ತಾಯಿಯ ಜೊತೆ ಪುಶ್ ಅಪ್ಸ್ ಮಾಡಿದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
ತನ್ನ ತಾಯಿ ಜೊತೆ ಪುಶ್ ಅಪ್ಸ್ ಮಾಡುತ್ತಿರುವ ವಿಡಿಯೋ ಹಾಕಿ “ತಡವಾಗಿಲ್ಲ. ನನ್ನ ತಾಯಿಗೆ ಈಗ 80 ವರ್ಷ, ಪ್ರತಿ ದಿನವನ್ನು ತಾಯಂದಿರ ದಿನವನ್ನಾಗಿ ಆಚರಣೆ ಮಾಡಬೇಕು”ಎಂದು ಬರೆದು ಟ್ವೀಟ್ ಮಾಡಿದ್ದಾರೆ.
It's never too late.
Usha Soman, my mother.
80 years young.#mothersday #love #mom #momgoals #fitwomen4fitfamilies #fitness #fitnessmotivation #healthylifestyle #fitterin2019 #livetoinspire make every day mother's day!!!!! ???????????? pic.twitter.com/7aPS0cWxlR
— Milind Usha Soman (@milindrunning) May 12, 2019
ಇದಾದ ಬಳಿಕ 53 ವರ್ಷದ ಮಿಲಿಂದ್ ಅವರು, “ಈ ಸಂದೇಶ ಎಲ್ಲಾ ತಾಯಂದಿರಿಗೆ ಸಲ್ಲಬೇಕು. ಪ್ರತಿದಿನ ಕನಿಷ್ಠ 5 ನಿಮಿಷವಾದರೂ ತಾಯಂದಿರ ಜೊತೆ ಸಮಯ ಕಳೆಯಬೇಕು. ನಾವು ಎಲ್ಲರೂ ತಾಯಂದಿರನ್ನು ಫಿಟ್ ಆಗಿ ನೋಡಿಕೊಳ್ಳೊಣ” ಹ್ಯಾಪಿ ಮದರ್ಸ್ ಡೇ ಎಂದು ಹೇಳಿದ್ದಾರೆ.
ಉಷಾ ಅವರು 2017 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಮ್ಯಾರಥಾನ್‍ನಲ್ಲಿ ಬರಿಗಾಲಿನಲ್ಲಿ ಓಡಿದ್ದರು ಮತ್ತು 100 ಕಿ.ಮೀ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.