ಮೈಸೂರು: ಈಗಿನ ದಿನಗಳಲ್ಲಿ ಮನುಷ್ಯರು ಎಲ್ಲೆಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಮನೆಯಲ್ಲಿ, ರಸ್ತೆಯಲ್ಲಿ ಅಲ್ಲದೇ ಪ್ರವಾಸಿ ತಾಣಗಳಲ್ಲಿ ಸೆಲ್ಫಿಗೆ ಮುಗಿಬೀಳದವರು ಯಾರೂ ಇಲ್ಲ. ಆದ್ರೆ ಈ ಸೆಲ್ಫಿ ಕ್ರೇಜ್ ನಿಂದಾಗಿ ಕೆಲವೊಮ್ಮೆ ಅನಾಹುತಗಳಾಗುತ್ತವೆ ಅನ್ನೋದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ.
ಇತ್ತೀಚೆಗಷ್ಟೇ ಉತ್ತರಾಖಂಡದ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರನ್ನು ಆನೆಯೊಂದು ಅಟ್ಟಾಡಿಸಿಕೊಂಡ ಬಂದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದ್ರೆ ಇಂತಹದ್ದೇ ಘಟನೆಯೊಂದು ನಮ್ಮ ರಾಜ್ಯದಲ್ಲೂ ನಡೆದಿದೆ.
Advertisement
ಇದನ್ನೂ ಓದಿ: ಪ್ರವಾಸಿ ವಾಹನವನ್ನೇ ಅಟ್ಟಾಡಿಸಿಕೊಂಡು ಬಂದ ಆನೆ- ವಿಡಿಯೋ ನೋಡಿ
Advertisement
ಹೌದು. ಮೈಸೂರು ಕಬಿನಿ ಜಲಾಶಯದ ಹಿನ್ನೀರಿನ ಖಾಲಿ ಪ್ರದೇಶದಲ್ಲಿ ಕಾಡಾನೆಯೊಂದು ತನ್ನ ಮರಿಯೊಂದಿಗೆ ಪ್ರವಾಸಿಗರು ಓಡಿಸಿಕೊಂಡು ಬಂದಿದೆ. ನೀರು ಹರಸಿ ಜಲಾಶಯದ ಹಿನ್ನೀರಿಗೆ ಬರುವ ಕಾಡು ಪ್ರಾಣಿಗಳ ಜೊತೆ ಚೆಲ್ಲಾಟ ಆಡಲು ಹೋಗಿ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಹೆಚ್‍ಡಿಕೋಟೆಯ ಎನ್‍ಬೇಗೂರು ವ್ಯಾಪ್ತಿಯ ಗುಂಡ್ರೆ ಅರಣ್ಯ ಪ್ರದೇಶದಲ್ಲಿರೋ ಆನೆಗಳು ಕಬಿನಿ ಜಲಾಶಯದ ಹಿನ್ನೀರಿನ ಖಾಲಿ ಪ್ರದೇಶಕ್ಕೆ ಬಂದಿದ್ದವು. ಈ ವೇಳೆ ಪ್ರವಾಸಿಗರು ತಮ್ಮ ಕಾರು ಹಾಗೂ ಜೀಪಿನಲ್ಲಿ ಖಾಲಿ ಪ್ರದೆಶಕ್ಕೆ ತೆರಳಿ, ದೂರದಿಂದಲೇ ಆನೆಯ ಜೊತೆ ಸೆಲ್ಫಿ ತೆಗೆಯಲು ಮುಂದಾದ್ರು. ಈ ವೇಳೆ ರೊಚ್ಚಿಗೆದ್ದ ಆನೆ ಕಾರಿನ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ದೃಶ್ಯ ಮೈ ಜುಂ ಎಂದನಿಸುತ್ತದೆ.
Advertisement
ಘಟನೆ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ಮೌನ ವಹಿಸಿದ್ದು, ಕಾಡು ಪ್ರಾಣಿಗಳಿಗೆ ಹಿಂಸಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
https://www.youtube.com/watch?v=pww8LUywQuA&feature=youtu.be