ರಾಂಚಿ: ನಿರಂತರ ಕ್ರಿಕೆಟ್ ನಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ಮಸ್ತಿ ಮಾಡುತ್ತ ಬಿಡುವಿನ ವೇಳೆ ಎಂಜಾಯ್ ಮಾಡುತ್ತಿದ್ದಾರೆ.
ಧೋನಿ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಜಾರ್ಖಂಡ್ ಸರೋವರ ಬಳಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಂಚಿ ನಗರದ ಬಳಿ 3 ಜಲಪಾತಗಳಿದ್ದು, ಯಾವಾಗ ಬೇಕಾದರು ಇಲ್ಲಿಗೆ ಬರಬಹುದು. ಆದರೆ ನಾನು 10 ವರ್ಷಗಳ ಬಳಿಕ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದೇನೆ. ಹಳೆಯ ನೆನಪುಗಳು ಮರುಕಳಿಸುತ್ತಿದೆ ಎಂದು ಧೋನಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
https://www.instagram.com/p/BmXf0lKHmhS/?utm_source=ig_embed&utm_campaign=embed_loading_state_control
ಸದ್ಯ ಧೋನಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಅಭಿಮಾನಿಗಳು ತಮ್ಮದೇ ಅಭಿಪ್ರಾಯ ತಿಳಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಧೋನಿಯನ್ನು ಬಾಹುಬಲಿ ಎಂದು ಹೊಗಳಿದ್ದಾರೆ.
2014 ರಲ್ಲಿ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದ ಮಹೇಂದ್ರ ಸಿಂಗ್ ವಿಶಾಂತ್ರಿ ಸಮಯವನ್ನು ಹೆಚ್ಚು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗಳಲ್ಲಿ ಭಾಗವಹಿಸಿದ ಬಳಿಕ ಧೋನಿ ಮರಳಿ ತೆರಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews