ಶಾರ್ಜಾ: ಅಫ್ಘಾನಿಸ್ತಾನ ತಂಡದ ಸ್ಫೋಟಕ ಆರಂಭಿಕ ಆಟಗಾರ ಮೊಹಮ್ಮದ್ ಶಹಜಾದ್ ಟಿ10 ಲೀಗ್ ಆರಂಭದ ಪಂದ್ಯದಲ್ಲೇ ಅಬ್ಬರಿಸಿದ್ದು, ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.
2018ರ ಪ್ರಥಮ ಟಿ10 ಲೀಗ್ ಆರಂಭದ ಪಂದ್ಯದಲ್ಲಿ ರಜಪೂತ್ ತಂಡದ ಪರ ಆಡುತ್ತಿರುವ ಮೊಹಮ್ಮದ್ ಶಹಜಾದ್ 16 ಎಸೆತಗಳಲ್ಲಿ 74 ರನ್ ಸಿಡಿಸಿ ಮಿಂಚಿದರು. ಇದರಲ್ಲಿ ಅಮೋಘ 8 ಸಿಕ್ಸರ್, 6 ಬೌಂಡರಿಗಳು ಸೇರಿದೆ. ಉಳಿದ ಎರಡು ಎಸೆತಗಳಲ್ಲಿ ಸಿಂಗಲ್ ರನ್ ತೆಗೆದಿದ್ದರು. ಈ ಮೂಲಕ ಯಾವುದೇ ಎಸೆತವನ್ನು ವ್ಯರ್ಥ ಮಾಡದೇ ರನ್ ಗಳಿಸಿದ್ದರು.
Advertisement
Few cricketers have achieved what Mohammad Shahzad has done tonight.????
Records tumbled, crashed and burned while he went about setting new ones. ????????#T10League pic.twitter.com/VgmDp9lS3Q
— T10 League (@T10League) November 21, 2018
Advertisement
ಕೇವಲ 17 ನಿಮಿಷದಲ್ಲಿ 4 ಓವರ್ ಗಳ ಮೂಲಕ 94 ರನ್ ಗಳ ಗುರಿಯನ್ನು ತಲುಪಿದ ರಜಪೂತ್ ತಂಡ ಗೆಲುವಿನ ನಗೆ ಬೀರಿತು. ಇದರೊಂದಿಗೆ ಟಿ10 ಲೀಗ್‍ನಲ್ಲಿ 74 ರನ್ ಸಿಡಿಸಿದ 30 ವರ್ಷದ ಶಹಜಾದ್ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಶಹಜಾದ್‍ಗೆ ಸಾಥ್ ನೀಡಿದ ಬ್ರೆಂಡನ್ ಮೆಕಲಮ್ 8 ಎಸೆತಗಳಲ್ಲಿ 21 ರನ್ ಸಿಡಿಸಿದರು.
Advertisement
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಸಿಂಧಿಸ್ ತಂಡ ನಿಗದಿತ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತ್ತು. ಸಿಂಧಿಸ್ ಪರ ವ್ಯಾಟ್ಸನ್ ಮಾತ್ರ ಎರಡಂಕಿ ದಾಟಿದ್ದರು. ರಜಪೂತ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಮುನಾಫ್ ಪಟೇಲ್ 20 ರನ್ ನೀಡಿ 3 ವಿಕೆಟ್ ಪಡೆದರು.
Advertisement
The Man of the Moment, Mohammad Shahzad shares his thoughts on a day where he was at his destructive best and find out what was the secret to his success tonight? ????#T10League pic.twitter.com/KcvsrIEuKh
— T10 League (@T10League) November 21, 2018
Power. Destruction. Brutality.
Mohammad Shahzad showed it all tonight! ????????????????#T10League pic.twitter.com/dPXcCoiRuw
— T10 League (@T10League) November 21, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv