ನವದೆಹಲಿ: ಆನ್ಲೈನ್ನಲ್ಲಿ ನಾವು ಬುಕ್ ಮಾಡುವುದು ಒಂದು, ಬರುವುದು ಮತ್ತೊಂದು ಎಂಬುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ವೀಡಿಯೋ ಉದಾಹರಣೆಯಾಗಿದೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಬುಕ್ ಮಾಡಿದ್ದು ಆನಿಯನ್ ರಿಂಗ್ಸ್, ಆದರೆ ಆತನಿಗೆ ಬಂದಿದ್ದು ಹಸಿ ಈರುಳ್ಳಿ. ಈ ಹಿನ್ನೆಲೆ ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
Advertisement
ಆನ್ಲೈನ್ ಫುಡ್ ಆರ್ಡರ್ ಮಾಡಿದ ಉಬೈದು ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಂಕಟವನ್ನು ಯಾವುದೇ ಪದಗಳನ್ನು ಬಳಸದೆ ವಿವರಿಸಿದ್ದಾನೆ. ಇನ್ಸ್ಟಾದಲ್ಲಿ ವೀಡಿಯೋ ಶೇರ್ ಮಾಡಿದ ಉಬೈದು, ನಾನು ಆನಿಯನ್ ರಿಂಗ್ಸ್ ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದೆ. ಆದರೆ ನನಗೆ ಸಿಕ್ಕಿದ್ದು, ಇದು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಾಳೆ ಫಸ್ಟ್ ಡೇ ಕೆಲಸಕ್ಕೆ ಹೋಗಬೇಕಿದ್ದವ ಮಸಣಕ್ಕೆ – ಅಪಘಾತದಲ್ಲಿ ತಂದೆ, ಮಗ ಸ್ಥಳದಲ್ಲೇ ಸಾವು
Advertisement
View this post on Instagram
Advertisement
ವೀಡಿಯೋದಲ್ಲಿ, ಉಬೈದು ಕ್ಯಾಮೆರಾವನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು. ನಂತರ ಆತ ಆನ್ಲೈನ್ ಬುಕ್ ಮಾಡಿದ ನಂತರ ತನಗೆ ಬಂದ ಹಸಿ ಈರುಳ್ಳಿಯನ್ನು ತೋರಿಸುತ್ತಾನೆ. ನಂತರ ಆತ ತನ್ನ ಕೈ ಬೆರಳುಗಳಿಗೆ ಉಂಗುರಗಳ ರೀತಿ ಕತ್ತರಿಸಿದ ಹಸಿ ಈರುಳ್ಳಿಯನ್ನು ಹಾಕಿಕೊಳ್ಳುತ್ತಾನೆ.
Advertisement
ಉಬೈದು ವೀಡಿಯೋದಲ್ಲಿ ರೆಸ್ಟೋರೆಂಟ್ನ ಹೆಸರನ್ನು ಶೇರ್ ಮಾಡಿಕೊಂಡಿಲ್ಲ. ನಾನು ಈ ಆನಿಯನ್ ರಿಂಗ್ಸ್ನ್ನು 59 ರೂ. ಗೆ ಆರ್ಡರ್ ಮಾಡಿದ್ದೆ ಎಂದು ವೀಡಿಯೋ ಮೂಲಕ ತೋರಿಸುತ್ತಾನೆ.
ವೀಡಿಯೋ ನೋಡಿದ ನೆಟ್ಟಿಗರು, ಅದಕ್ಕಾಗಿಯೇ ನಾನು ಯಾವುದನ್ನು ನಂಬುವುದಿಲ್ಲ. ಮತ್ತೊಬ್ಬರು, ನಾನು ಅವನ ನಗುವಿನ ಹಿಂದಿನ ನೋವನ್ನು ಅನುಭವಿಸಬಲ್ಲೆ ಎಂದು ಕಾಮೆಂಟ್ಗಳ ಸುರಿಮಳೆಯೇ ಬರುತ್ತಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದು, ಆನ್ಲೈನ್ ಆರ್ಡರ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕೋಮು ಗಲಭೆ ಸೃಷ್ಟಿಸುವ ಪೋಸ್ಟ್ ಹಾಕಿದ ಹಿರಿಯ ಸರ್ಕಾರಿ ಅಧಿಕಾರಿ ಅರೆಸ್ಟ್