ಮುಂಬೈ: ಬೇಸಿಗೆಯಲ್ಲಿ, ಭಾರತದ ಅನೇಕ ಭಾಗಗಳು ಬರ ಮತ್ತು ಶಾಖದ ಪರಿಸ್ಥಿತಿಗಳಲ್ಲಿ ತತ್ತರಿಸಿದಾಗ, ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಮಹಿಳೆಯರು ತಮ್ಮ ಕುಟುಂಬಗಳಿಗೆ ನೀರು ತರಲು ತಮ್ಮ ಜೀವವನ್ನು ಪಣಕ್ಕಿಡಬೇಕಾಗುತ್ತದೆ. ಅಂತಹ ಒಂದು ಮನಕಲಕುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶುದ್ಧ ಕುಡಿಯುವ ನೀರಿಗಾಗಿ ಮಹಾರಾಷ್ಟ್ರದ ಮಹಿಳೆಯೊಬ್ಬರು ಬಹುತೇಕ ಬತ್ತಿಹೋಗಿರುವ ಆಳವಾದ ಬಾವಿಗೆ ಇಳಿದು ತಮ್ಮ ಪ್ರಾಣವನ್ನು ಸಹ ಲೆಕ್ಕಿಸದೇ ನೀರು ತರುತ್ತಿರುವ ವೀಡಿಯೋವೊಂದು ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.
यह तस्वीर महाराष्ट्र के त्रयम्बकेश्वर के पास मेटघर गाँव की है…पीने के लिए पानी नहीं है, महिलाएं अपनी जान जोखिम में डाल पानी भर रही हैं.. यह सब 2022 में हो रहा है!
केंद्र बनाम राज्य, हिन्दू मुस्लिम और ईडी-CBI जैसे बड़े मुद्दों के बीच महाराष्ट्र के ऐसे मूलभूत मुद्दे खो गए हैं.. pic.twitter.com/StZI95wKWD
— sohit mishra (@sohitmishra99) April 6, 2022
Advertisement
ವೀಡಿಯೋದಲ್ಲಿ ಮಹಿಳೆಯೊಬ್ಬರು ಬಾವಿಗೆ ಇಳಿಯುವುದನ್ನು ನೀವು ಕಾಣಬಹುದಾಗಿದೆ. ಈ ದೃಶ್ಯಾವಳಿಯು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಹಳ್ಳಿಯೊಂದರದ್ದಾಗಿದೆ. ಬಾವಿಯಲ್ಲಿ ಅಳವಡಿಸಿರುವ ಚಿಕ್ಕ ಚಿಕ್ಕ ಕಲ್ಲುಗಳ ಸಹಾಯದಿಂದ ಆಳವಾಗಿರುವ ಬಾವಿಯಲ್ಲಿ ಇಳಿಯುತ್ತಿದ್ದಾರೆ. ಬಾವಿಯಲ್ಲಿ ಒಂದು ಬಿಳಿಯ ಬಣ್ಣದ ಬಕೆಟ್‍ಗೆ ಹಗ್ಗ ಕಟ್ಟಿ ಜೋತು ಬಿಟ್ಟಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್
Advertisement
ಈ ವೀಡಿಯೋದಲ್ಲಿನ ದೃಶ್ಯಾವಳಿಯು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ಬಳಿಯ ಮೆಟ್‍ಘರ್ ಹಳ್ಳಿಯೊಂದರದ್ದಾಗಿದೆ. ಕುಡಿಯಲು ನೀರಿಲ್ಲ. ಗ್ರಾಮದ ಮಹಿಳೆಯರು ಜೀವವನ್ನೇ ಪಣಕ್ಕಿಟ್ಟು ನೀರು ತುಂಬಿಸಿಕೊಂಡು ತರುತ್ತಿದ್ದಾರೆ ಎಂದು ಸಾಲುಗಳನ್ನು ಬರೆದು ಕೊಂಡು ಹರಿಬಿಟ್ಟಿದ್ದಾರೆ.
Advertisement
6 April; येत्या ४८ तासांत उत्तर मध्य महाराष्ट्र आणि विदर्भाच्या काही भागात उष्णतेची लाट येण्याची शक्यता आहे.
दक्षिण मध्य महाराष्ट्राच्या काही भागात गडगडाटासह हलका ते मध्यम पाऊस पडण्याची शक्यता आहे.
– IMD pic.twitter.com/NzaC7U2mLS
— K S Hosalikar (@Hosalikar_KS) April 6, 2022
Advertisement
ಮಹಾರಾಷ್ಟ್ರದಲ್ಲಿ ಬಿಸಿಗಾಳಿ ತೀವ್ರವಾಗಿ ಕಾಡುತ್ತಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಏಪ್ರಿಲ್ 10 ರವರೆಗೆ ವಿದರ್ಭದಲ್ಲಿ ಅತೀ ಹೆಚ್ಚು ಶಾಖದ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದನ್ನೂ ಓದಿ: 22 ಐಪಿಎಸ್ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ
ಬುಧವಾರ ಟ್ವೀಟ್ ಮಾಡಿದ ಪುಣೆಯ ಹವಾಮಾನ ಸಂಶೋಧನೆ ಮತ್ತು ಸೇವೆಗಳ ಮುಖ್ಯಸ್ಥ ಕೆಎಸ್ ಹೊಸಲಿಕರ್, ಮುಂದಿನ 48 ಗಂಟೆಗಳಲ್ಲಿ ಉತ್ತರ ಮಧ್ಯ ಮಹಾರಾಷ್ಟ್ರ ಮತ್ತು ವಿದರ್ಭದ ಕೆಲವು ಭಾಗಗಳಲ್ಲಿ ಶಾಖದ ಅಲೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಬೇಸಿಗೆಯ ಕಾಲದಲ್ಲಿ ಶಾಖದ ಗರಿಷ್ಠ ತಾಪಮಾನವು ಬಯಲು ಪ್ರದೇಶಗಳಿಗೆ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ತಲುಪುವ ಸಾಧ್ಯತೆಯಿರುತ್ತದೆ. ಗುಡ್ಡಗಾಡು ಪ್ರದೇಶಗಳಿಗೆ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಎಂದು ವರ್ಗೀಕರಿಸಲಾಗುತ್ತದೆ. ಸಾಮಾನ್ಯದಿಂದ ಗರಿಷ್ಠ ತಾಪಮಾನ ವ್ಯತ್ಯಾಸವು 4.5 ಡಿಗ್ರಿ ಸೆಲ್ಸಿಯಸ್ ನಿಂದ 6.4 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಬೇಕು. ದಾಖಲಾದ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 6.4 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಾದಾಗ ತೀವ್ರವಾದ ಶಾಖದ ಅಲೆಯನ್ನು ಘೋಷಿಸಲಾಗುತ್ತದೆ.
ಹವಾಮಾನ ವರದಿಯ ಪ್ರಕಾರ, ವಿದರ್ಭದ ಅಕೋಲಾವು 40 ಡಿಗ್ರಿ ಸೆಲ್ಸಿಯಸ್‍ಗಿಂತ ಗರಿಷ್ಠ ತಾಪಮಾನವನ್ನು ಎದುರಿಸುತ್ತಿದೆ. ಭೂಮಿಯಲ್ಲಿರುವ ಪಾದರಸದ ಮಟ್ಟವು 44 ಡಿಗ್ರಿ ಸೆಲ್ಸಿಯಸ್ ತಾಪವನ್ನು ತಲುಪುವ ಸಂಭವವಿದೆ. ಅಕೋಲಾ ವಿದರ್ಭದಲ್ಲಿ ಇಲ್ಲಿಯವರೆಗೆ 44 ಡಿಗ್ರಿ ಶಾಖವನ್ನು ಹೊಂದಿದೆ ಎಂದು ವರದಿಯಾಗಿದೆ.