ಕ್ರೈಮಿಯಾ: ಪ್ರವಾಸಿಗರನ್ನು ನೋಡುತ್ತಿದ್ದಂತೆ ವಿಲ್ನೋಹಿಸ್ರ್ಕ್ ನ ಸಫಾರಿ ಪಾರ್ಕ್ ನಲ್ಲಿದ್ದ ಸಿಂಹವೊಂದು ವಾಹನದ ಮೇಲೆ ಜಿಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಓಪನ್ ಸಫಾರಿ ವಾಹನದಲ್ಲಿ ಪ್ರವಾಸಿಗರು ಪಾರ್ಕ್ ವೀಕ್ಷಣೆ ಮಾಡ್ತಿದ್ದರು. ವ್ಯಾನ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ನೋಡುತ್ತಿದ್ದಂತೆ ಫಿಲ್ಯಾ ಹೆಸರಿನ ಸಿಂಹವೊಂದು ವಾಹನದ ಮೇಲೆ ಜಿಗಿದಿದೆ. ವಾಹನದ ಮೇಲೆ ಸಿಂಹ ಜಿಗಿಯತ್ತಿದ್ದಂತೆ ಮಹಿಳೆಯೊಬ್ಬರು ವ್ಯಾನ್ ಇಳಿದು ಬಂದಿದ್ದಾರೆ. ಆದ್ರೆ ತನ್ನನ್ನು ಸಾಕಿದ ಚಾಲಕನ ಬಳಿ ಬಂದು ಆತನನ್ನು ಮುದ್ದಾಡಿದೆ. ಅಷ್ಟೇ ಅಲ್ಲದೇ ವಾಹನದಲ್ಲಿದ್ದ ಪ್ರವಾಸಿಗರಿಗೂ ಯಾವುದೇ ಹಾನಿಯುಂಟು ಮಾಡಿಲ್ಲ.
Advertisement
Advertisement
ಪಾರ್ಕ್ ನಲ್ಲಿಯ ವಿಠ್ಠಾ ಎಂಬ ಸಿಂಹವೊಂದು ಒಂದು ವಾರದ ಹಿಂದೆ ಪ್ರವಾಸಿ ಮಹಿಳೆಯ ತೋಳನ್ನು ಕಚ್ಚಿತ್ತು. ಈ ಘಟನೆಯ ಆದ ಸ್ವಲ್ಪ ದಿನಗಳಲ್ಲಿ ಈ ಆಶ್ಚರ್ಯವಾದ ಘಟನೆ ನಡೆದಿದೆ. ಇದನ್ನು ಪಾರ್ಕ್ ಸಿಬ್ಬಂದಿ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗಿದೆ. ಈ ವಿಡಿಯೋ ಇದೂವರೆಗೂ 4 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.
Advertisement
ಈ ಹಿಂದೆ ಇಂಗ್ಲೆಂಡಿನ ವೆಸ್ಟ್ ಮಿಡ್‍ಲ್ಯಾಂಡ್ ನ ವರ್ಸೆಸ್ಟಶೈರ್ ನಲ್ಲಿ ಕಾರಿನಲ್ಲಿ ಸಫಾರಿ ಮಾಡುವ ವೇಳೆ ಎದುರಿಗೆ ಬಂದ ಜಿರಾಫೆಗೆ ಆಹಾರ ನೀಡಲು ದಂಪತಿ ಮುಂದಾಗಿದ್ದರು. ಈ ವೇಳೆ ಕಾರಿನಲ್ಲಿದ್ದ ಆಹಾರದ ಪೊಟ್ಟಣಗಳನ್ನು ನೋಡಿದ ಜಿರಾಫೆ ಕಾರಿನೊಳಗೆ ತನ್ನ ತಲೆಯನ್ನು ತೂರಿಸಿತ್ತು. ಇದ್ರಿಂದ ಭಯಗೊಂಡ ಕಾರಿನಲ್ಲಿದ್ದ ಮಹಿಳೆ ಕಾರಿನ ಕಿಟಕಿಯ ಗ್ಲಾಸ್ ಮೇಲೆರಿಸಲು ಪ್ರಯತ್ನಿಸಿದ್ದರು. ಜಿರಾಫೆಗೆ ತಗುಲಿದ ಗ್ಲಾಸ್ ಒಡೆದು ಚೂರು ಚೂರಾಚೂರಾಗಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv