ಮುಂಬೈ: ನಗರದ ಅಂಧೇರಿಯಲ್ಲಿರುವ ಶೇರ್-ಇ-ಪಂಜಾಬ್ ನ ಪ್ಲೇ-ಸ್ಕೂಲ್ ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಬಾಲಕನೊಬ್ಬ ಚಿರತೆಯನ್ನು ನೋಡಿದ್ದಾನೆ ಹಾಗೂ ಜನರಿಗೆ ಚಿರತೆಯ ಬಗ್ಗೆ ಹೇಳಿದ್ದಾನೆ. ಅರಣ್ಯಾಧಿಕಾರಿಗಳು ಬರುವ ಮೊದಲು ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಶಾಲೆಯ ಸುತ್ತ ಬಲೆಯನ್ನು ಹಾಕಿ ಚಿರತೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು.
Advertisement
Advertisement
ಶಾಲೆಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ಸಿಸಿಟಿವಿಯ ಲೈವ್ ವಿಡಿಯೋದಿಂದ ಚಿರತೆಯನ್ನು ಕಂಡು ಹಿಡಿಯಲು ಸಾಧ್ಯವಾಗಿದೆ. ಮೊಬೈಲಿನಲ್ಲಿ ಸಿಸಿಟಿವಿ ದೃಶ್ಯ ಲೈವ್ ನೋಡಲು ಶಾಲೆಯ ಮುಖ್ಯ ಶಿಕ್ಷಕಿ ಅಧಿಕಾರಿಗಳಿಗೆ ಸಹಾಯ ಮಾಡಿದರು. ನಂತರ ಅಧಿಕಾರಿಯೊಬ್ಬರು ಶಾಲೆಯ ಹಿಂದಿನ ಕಾಂಪೌಂಡ್‍ನಿಂದ ಜಿಗಿದು ಶಾಲೆಯೊಳಗೆ ಚಿರತೆಯನ್ನು ಹುಡುಕಲು ಹೋಗಿದ್ದರು ಎಂದು ಪರಿಸರ ಕಾರ್ಯಕರ್ತರಾದ ಸುನೀಶ್ ಸುಬ್ರಮಣ್ಯಂ ತಿಳಿಸಿದ್ದಾರೆ.
Advertisement
#WATCH: A leopard enters a play school in Andheri's Sher-E-Punjab area (10.12.17) #Mumbai pic.twitter.com/2A6XpycjMa
— ANI (@ANI) December 11, 2017
Advertisement
ಭಾನುವಾರ ಬೆಳಗ್ಗೆ ಸುಮಾರು 7.23 ಗಂಟೆಗೆ ನಮಗೆ ಕರೆ ಬಂದ ಕೂಡಲೇ ನಾವು ಸ್ಥಳಕ್ಕೆ ಹೋಗಿದ್ದೇವೆ. ನಾಸಿಕ್‍ನಿಂದ ಕೂಡ ಅರಣ್ಯಾಧಿಕಾರಿಗಳು ಬಂದಿದ್ದರು ಎಂದು ಎಂಐಡಿಸಿ ಪೊಲೀಸ್ ಸ್ಟೇಷನ್ ನ ಅಧಿಕಾರಿ ತಿಳಿಸಿದ್ದಾರೆ.
2016ರ ಫೆಬ್ರವರಿಯಲ್ಲಿ ಬೆಂಗಳೂರಿಲ್ಲಿರುವ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿ, ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿತ್ತು.
https://www.youtube.com/watch?v=MRrQy0If424
https://www.youtube.com/watch?v=veALHeGUpw0
https://www.youtube.com/watch?v=DQRxPymraes