Connect with us

ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕೆ ಕತ್ರಿನಾ ಭರ್ಜರಿ ತಯಾರಿ

ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕೆ ಕತ್ರಿನಾ ಭರ್ಜರಿ ತಯಾರಿ

ಮುಂಬೈ: ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ಖಾನ್‍ಗೆ ಜೋಡಿಯಾಗಿ ಗೆಲುವಿನ ಮೆಟ್ಟಿಲೇರಿದ ಕತ್ರಿನಾ ಕೈಫ್ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರವು 1839 ರ ‘ಕನ್‍ಫೆಶನ್ ಆಫ್ ಎ ಥಗ್’ ಎಂಬ ಕಾದಂಬರಿ ಆಧಾರಿತ ಚಿತ್ರವಾಗಿದೆ. ಇದರಲ್ಲಿ ಆಮೀರ್ ಖಾನ್‍ರ ಜೊತೆ ಮೊಟ್ಟ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ತೆರೆ ಹಂಚಿಕೊಂಡಿದ್ದಾರೆ. ದಂಗಲ್ ಖ್ಯಾತಿಯ ಫಾತಿಮಾ ಸನಾ ಶೇಕ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಕತ್ರಿನಾ ಬಾಲಿವುಡ್ ನಲ್ಲಿ ತಮ್ಮ ಅದ್ಭುತ ನೃತ್ಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಚಿತ್ರಕ್ಕಾಗಿ ಕತ್ರಿನಾ ಡ್ಯಾನ್ಸರ್ ಪ್ರಭುದೇವ ಅವರಿಂದ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಎಲ್ಲರ ಹುಬ್ಬೆರಿಸುವಂತೆ ಗಾಳಿಯಲ್ಲಿ ತೇಲುವ ರೀತಿಯಲ್ಲಿ ಮತ್ತು ಜಿಮ್ನಾಸ್ಟಿಕ್ ಮಾದರಿಯಲ್ಲಿ ಕತ್ರಿನಾ ಡಾನ್ಸ್ ಮಾಡಿದ್ದಾರೆ. ಕತ್ರಿನಾ ಕೈಫ್ ತಮ್ಮ ನೃತ್ಯಾಭ್ಯಾಸದ ವಿಡಿಯೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚಿತ್ರದಲ್ಲಿ ಕತ್ರಿನಾ ಕೈಫ್, ಫಾತಿಮಾ ಶೇಕ್ ತೆರೆಯನ್ನು ಹಂಚಿಕೊಂಡಿದ್ದಾರೆ. ತಾವು ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸುತ್ತಿರುವುದರ ಬಗ್ಗೆ ನಟಿ ಫಾತಿಮಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಆಮೀರ್ ಮತ್ತು ಅಮಿತಾಬ್ ಅವರ ಫಸ್ಟ್ ಲುಕ್ ನೋಡಿ ಮೆಚ್ಚುಗೆ ನೀಡಿದ ಜನರು ನಾಯಕಿಯರ ಫಸ್ಟ್ ಲುಕ್‍ಗಾಗಿ ಕಾಯುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿಜಯ್ ಕೃಷ್ಣ ಆಚಾರ್ಯ ಆಕ್ಷನ್-ಕಟ್ ಹೇಳಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರ ನವೆಂಬರ್ 7ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

Advertisement
Advertisement