ನವದೆಹಲಿ: ಅರಣ್ಯದಲ್ಲಿ ಆನೆ ತನ್ನಪಾಡಿಗೆ ಧಮ್ ಎಳೆಯುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೈಸೂರಿನಿಂದ 50 ಕಿ.ಮಿ ದೂರದಲ್ಲಿರೋ ನಾಗರ ಹೊಳೆ ಅಭಯಾರಣ್ಯದಲ್ಲಿ ಈ ದೃಶ್ಯ ಸೆರೆಯಾಗಿದೆ. ಆನೆ ಧಮ್ ಎಳೆಯುತ್ತಿರುವ ದೃಶ್ಯವನ್ನು ವನ್ಯಜೀವಿ ಸಂರಕ್ಷಣಾ ಅಧಿಕಾರಿ ವಿನಯ್ ಕುಮಾರ್ ಎಂಬವರು ಸೆರೆಹಿಡಿದಿದ್ದಾರೆ.
Advertisement
ಈ ಘಟನೆ ಕಳೆದ ವರ್ಷ ಏಪ್ರಿಲ್ ನಲ್ಲಿ ನಡೆದಿದ್ದು, ಮಾರ್ಚ್ 20ರಂದು ಆ ವಿಡಿಯೋವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಮೃಗಾಲಯದಲ್ಲಿ ಧಮ್ ಎಳೆದ ಚಿಂಪಾಂಜಿ- ವಿಡಿಯೋ ಫುಲ್ ವೈರಲ್
Advertisement
Advertisement
ವಿಡಿಯೋದಲ್ಲೇನಿದೆ?: ಆನೆ ತನ್ನ ಸೊಂಡಿಲಿನಿಂದ ಏನೋ ಒಂದು ವಸ್ತುವನ್ನು ನೆಲದಿಂದ ಹೆಕ್ಕಿ ತನ್ನ ಬಾಯೊಳಗೆ ಇಡುತ್ತದೆ. ಈ ವೇಳೆ ಧಮ್ ಎಳೆದಂತೆ ಬಾಯಿಂದ ಹೊಗೆ ಹೊರಬರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಕಾಣುವ ಹೆಣ್ಣಾನೆಗೆ ಸುಮಾರು 30-35 ವರ್ಷ ವಯಸ್ಸಾಗಿರಬಹುದೆಂದು ವಿನಯ್ ಕುಮಾರ್ ತಿಳಿಸಿದ್ದಾರೆ.
Advertisement
ಅಸಲಿ ವಿಚಾರವೇನು?: ಅಸಲಿಗೆ ಆನೆ ಧೂಮಪಾನ ಮಾಡುತ್ತಿಲ್ಲ. ಬದಲಾಗಿ ಬೆಂಕಿಯಿಂದ ಸುಟ್ಟುಹೋದ ಜಾಗದಲ್ಲಿ ಆನೆ ಆಹಾರ ಹುಡುಕುತ್ತಿತ್ತು. ಈ ವೇಳೆ ತನಗೆ ಸಿಕ್ಕಿದ ಇದ್ದಿಲನ್ನು ತಿಂದಿದೆ. ಹೀಗಾಗಿ ಇದ್ದಿಲಿನ ಜೊತೆಗಿದ್ದ ಬೂದಿ ಸುತ್ತಲೂ ಹಾರಿದ್ದರಿಂದ ಅದು ಹೊಗೆಯಂತೆ ಕಾಣಿಸಿದೆ. ಆದ್ರೆ ಹೆಣ್ಣಾನೆ ಸಿಗರೇಟ್ ಸೇದುತ್ತಿದೆ ಅಂತ ಭಾವಿಸಿದ್ದಾರೆಂದು ಆನೆ ಜೀವಶಾಸ್ತ್ರಜ್ಞ ಡಾ. ವರುಣ್ ಗೋ ಸ್ವಾಮಿ ವಿವರಿಸಿದ್ದಾರೆ.
https://www.facebook.com/wcs.ind/videos/1605772962872800/