ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದದ ಉಗುರನ್ನು ಕತ್ತರಿಸಿಕೊಂಡಿದ್ದಾರೆ.
ಶ್ರೀಧರ್ ಚಿಲ್ಲಾಲ್ ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರನ್ನು ಬೆಳಸಿ ವಿಶ್ವ ಗಿನ್ನಿಸ್ ದಾಖಲೆ ಮಾಡಿದ್ದರು. ಶ್ರೀಧರ್ 1952ರಿಂದ ತಮ್ಮ ಉಗುರುಗಳನ್ನು ಬೆಳಸಿಕೊಂಡಿದ್ದರು. ಈಗ ಅವರಿಗೆ 82 ವರ್ಷವಾಗಿದ್ದು, ಈಗ ತಮ್ಮ ಉದ್ದನೆಯ ಉಗುರುಗಳನ್ನು ಕತ್ತರಿಸಿದ್ದಾರೆ.
Advertisement
ಶ್ರೀಧರ್ ಮೂಲತಃ ಪುಣೆಯವರಾಗಿದ್ದು, ತನ್ನ ಬೆರಳ ಉಗುರುಗಳನ್ನು ಕತ್ತರಿಸೋಕೆ ನ್ಯೂಯಾರ್ಕ್ ಗೆ ಹೋಗಿದ್ದರು. ನ್ಯೂಯಾರ್ಕ್ ನ ರಿಪ್ಲೆ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಶ್ರೀಧರ್ ತಮ್ಮ ಉಗುರನ್ನು ಕತ್ತರಿಸಿಕೊಂಡಿದ್ದಾರೆ.
Advertisement
Advertisement
ಶ್ರೀಧರ್ ಅವರ ಐದು ಬೆರಳಿನ ಉಗುರುಗಳು ಒಟ್ಟು 909.6 ಸೆ.ಮೀ ಉದ್ದವಿದ್ದು, ಅದರಲ್ಲೂ ಅವರ ಹೆಬ್ಬೆಟ್ಟಿನ ಉಗುರು 197.8 ಸೆ.ಮೀ ಉದ್ದವಿತ್ತು. ಒಂದೇ ಕೈಯಲ್ಲಿ ವಿಶ್ವದ ಅತ್ಯಂತ ಉದ್ದದ ಉಗುರು ಹೊಂದಿದ್ದರಿಂದ 2016ರಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದರು.
Advertisement
ಸದ್ಯ ಶ್ರೀಧರ್ ಅವರ ಕತ್ತರಿಸಿದ ಉಗುರುಗಳನ್ನು ನ್ಯೂಯಾರ್ಕ್‍ನ ಟೈಮ್ಸ್ ಸ್ಕ್ವೇರ್ ನಲ್ಲಿರುವ ರಿಪ್ಲೆ ಬಿಲಿವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಶ್ರೀಧರ್ ತನ್ನ ಉಗುರುಗಳನ್ನು ಕತ್ತರಿಸಿಕೊಳ್ಳುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಇದೂವರೆಗೂ 1.3 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ.
https://www.youtube.com/watch?v=gwoYzpesr4c