ವಾಷಿಂಗ್ಟನ್: ಅಪರಿಚಿತರ ಕಾರಿನಿಂದ ವಸ್ತುಗಳನ್ನು ಪಡೆಯಬೇಕು ಅಂದ್ರೆ ಜನ ಹಿಂದೇಟು ಹಾಕುವುದೇ ಹೆಚ್ಚು. ಆದರೆ ಅಮೆರಿಕದಲ್ಲಿ ಕರಡಿಯೊಂದು ಮಾಲೀಕನಂತೆ ಗಾಂಭಿರ್ಯವಾಗಿ ಕಾರಿನ ಬಳಿಗೆ ಬಂದು, ತಿನಿಸುಗಳನ್ನು ಎತ್ತಿಕೊಂಡ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕರೆನ್ ಸಿಮಿಂಗ್ಟನ್ ಹೊಗರ್ತ್ ಎಂಬವರು ಸೆಪ್ಟೆಂಬರ್ 25 ರಂದು ಈ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಗ್ಯಾಟ್ಲಿನ್‍ಬರ್ಗ್ ನಲ್ಲಿ ಈ ದೃಶ್ಯವನ್ನು ನಾನೇ ಸೆರೆ ಹಿಡಿದಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.
Advertisement
Advertisement
ವಿಡಿಯೋದಲ್ಲಿ ಏನಿದೆ?
ಹಸಿನಿಂದ ಆಹಾರ ಅರಸುತ್ತ ಬಂದಿದ್ದ ಕರಡಿಯೊಂದು, ನೀಲಿ ಬಣ್ಣದ ಕಾರನ್ನು ನೋಡುತ್ತದೆ. ಮಾಲೀಕನಂತೆ ಹೆಜ್ಜೆ ಹಾಕುತ್ತಾ ಬಂದ ಕರಡಿ, ತನ್ನ ಎರಡು ಕಾಲುಗಳನ್ನು ಎತ್ತಿ ಕಾರಿನ ಬಲಭಾಗದ ಬಾಗಿಲು ತೆಗೆಯುತ್ತದೆ. ಬಳಿಕ ಕಾರಿನ ಹೊರಗೆ ನಿಂತು ಮನುಷ್ಯರಂತೆ ಕಾರಿನಲ್ಲಿದ್ದ ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೊರಗೆ ಬರುತ್ತದೆ. ಬಾಗಿಲನ್ನು ಹಾಗೆ ಬಿಟ್ಟು, ಆಹಾರ ಪದಾರ್ಥದ ಬ್ಯಾಗ್‍ನ್ನು ಬಾಯಿಯಲ್ಲಿ ಇಟ್ಟುಕೊಂಡು ಹೋಗುತ್ತದೆ.
Advertisement
ಕರಿಡಿ ಹೋದ ತಕ್ಷಣ ಮಾಲೀಕ ಕಾರಿನ ಎಲ್ಲ ಬಾಗಿಲುಗಳನ್ನು ಹಾಕಿ ಬಂದು ಕುಳಿತ್ತಿದ್ದ. 10 ನಿಮಿಷ ಕಳೆಯುತ್ತಿದ್ದಂತೆ ಮತ್ತೆ ಕಾರಿನ ಬಳಿಗೆ ಬಂದ ಕರಡಿ, ಆಹಾರ ಪದಾರ್ಥಗಳನ್ನು ಪಡೆಯಲು ಕಾರಿನ ಎಲ್ಲ ಬಾಗಿಲನ್ನು ತೆರೆಯಲು ಪ್ರಯತ್ನಿಸಿತ್ತು. ಆದರೆ ಆ ದೃಶ್ಯವನ್ನು ಸೆರೆ ಹಿಡಿದಿಲ್ಲ ಎಂದು ಕರೆನ್ ಸಿಮಿಂಗ್ಟನ್ ಹೊಗರ್ತ್ ಹೇಳಿದ್ದಾರೆ.
Advertisement
https://www.facebook.com/karen.hogarth.58/videos/2211294432418654/
ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು, ಕರಡಿ ಬಾಗಿಲು ತೆಗೆದು ಆಹಾರ ಪದಾರ್ಥಗಳನ್ನಷ್ಟೇ ತೆಗೆದುಕೊಂಡು ಹೋಗಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ತಿಂಗಳಲ್ಲಿ ಕರಡಿಯೊಂದು ಕಾರಿನ ಬಾಗಿಲು ತೆಗೆದು ಆಸನಗಳನ್ನು ಹಾಳು ಮಾಡಿತ್ತು. ಹೀಗಾಗಿ ಚಾಲಕರು ಬಾಗಿಲನ್ನು ಹಾಕಿ ಹೋಗಬೇಕು ಎಂದು ಟೆನ್ನೆಸ್ಸೀ ವನ್ಯಜೀವಿ ಸಂಪನ್ಮೂಲ ಸಂಸ್ಥೆ ಜಾಗೃತಿ ಮೂಡಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv