ಶಿಮ್ಲಾ: ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕಿ ಆಶಾ ಕುಮಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದು, ಇದರಿಂದ ಕೋಪಗೊಂಡ ಪೇದೆ ಪುನಃ ಕ್ಷಣ ಮಾತ್ರದಲ್ಲೇ ಶಾಸಕಿಯ ಕಪಾಳಕ್ಕೆ ಏಟು ಕೊಟ್ಟಿದ್ದು ವಿಡಿಯೋ ವೈರಲ್ ಆಗಿದೆ.
ಇಂದು ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಹಿಮಾಚಲ ಪ್ರದೇಶ ಚುನಾವಣೆಯಲ್ಲಿನ ಪಕ್ಷದ ನಿರ್ವಹಣೆ ಕುರಿತ ಪರಾಮರ್ಶನ ಸಭೆಯಲ್ಲಿ ಭಾಗವಹಿಸಲು ಆಶಾಕುಮಾರಿ ಆಗಮಿಸಿದ್ದರು. ಆದರೆ ಸಭೆಯಲ್ಲಿ ಭಾಗವಹಿಸಲು ಪೊಲೀಸರು ತಡೆ ಒಡ್ಡಿದ್ದಕ್ಕೆ ಸಿಟ್ಟಾದ ಆಶಾ ಕುಮಾರಿ ಮಹಿಳಾ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ.
Advertisement
Advertisement
ಆಶಾ ಕುಮಾರಿ ಪಂಜಾಬ್ ರಾಜ್ಯದ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿದ್ದು, ದಾಲ್‍ಹೌಸಿ ಕ್ಷೇತ್ರದ ಶಾಸಕಿಯಾಗಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಶಾ ಕುಮಾರಿ, ಪೊಲೀಸ್ ಪೇದೆ ನನ್ನನ್ನು ನಿಂದಿಸಿದಲ್ಲದೇ ತಳ್ಳಿದಳು. ನಾನು ಒಳಗಡೆ ಪ್ರವೇಶಿಸಲು ತಡೆ ಒಡ್ಡಲಾಯಿತು. ನಾನು ಆಕೆಯ ತಾಯಿಯ ವಯಸ್ಸಿನ ಮಹಿಳೆ. ಆದ್ರೆ ನಾನು ಆ ವೇಳೆ ಕೋಪವನ್ನು ನಿಯಂತ್ರಿಸಿಕೊಳ್ಳಬೇಕಿತ್ತು. ಈ ಘಟನೆ ಸಂಬಂಧ ನಾನು ಮಹಿಳಾ ಪೇದೆಯಲ್ಲಿ ಕ್ಷಮೆ ಕೇಳುತ್ತೇನೆ ಅಂತಾ ಅಂದ್ರು.
Advertisement
ಹಿಮಚಾಲಪ್ರದೇಶ ಚುನಾವಣೆ ಬಳಿಕ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣೆಯ ಫಲಿತಾಂಶದ ಪರಮಾರ್ಶನ ಸಭೆ ನಡೆಸುತ್ತಿದ್ದಾರೆ. ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದು ರಾಹುಲ್ ಗಾಂಧಿಗೆ ಅಸಮಧಾನ ತರಿಸಿದ್ದು, ಬೇರೆಯೊಬ್ಬರ ಮೇಲೆ ಕೈ ಎತ್ತುವುದು ತಪ್ಪಾಗುತ್ತದೆ. ಇದು ಕಾಂಗ್ರೆಸ್ ಸಂಸ್ಕೃತಿ ಅಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
Advertisement
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 68 ಕ್ಷೇತ್ರಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 20 ಮತ್ತು ಪಕ್ಷೇತರ ಅಭ್ಯರ್ಥಿಗಳು 4 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದರು.