ಬೀದರ್: ನಾಯಿಗಳ ದಾಳಿಗೊಳಗಾಗಿ ರಕ್ತದ ಮಡುವಿನಲ್ಲಿ ಕೋತಿಯೊಂದು ಒದ್ದಾಡುತ್ತಿರೋ ಮನಕಲಕುವ ಘಟನೆಯೊಂದು ಬೀದರ್ ನಗರದ ಸಾಯಿ ದೇವಸ್ಥಾನದ ಬಳಿ ನಡೆದಿದೆ.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶ್ವಾನಗಳ ದಾಳಿಗೆ ಸಿಲುಕಿ ಕೋತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ದೃಶ್ಯ ನೆರೆದವರ ಕಣ್ಣಂಚಲ್ಲಿ ನೀರು ತರಿಸಿದೆ. ಕೋತಿ ತನ್ನ ಪ್ರಾಣ
ಸಂಕಟದಿಂದ ಒದ್ದಾಡುತ್ತಿರೋ ಈ ದೃಶ್ಯವನ್ನು ಸ್ಥಳೀಯರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
ಬೀದರ್ ನಗರದಲ್ಲಿ ಬೀದಿ ಶ್ವಾನಗಳ ಕಾಟ ವಿಪರೀತವಾಗಿದ್ದು, ಇಂದು 8 ರಿಂದ 10 ಶ್ವಾನಗಳು ಗುಂಪೊಂದು ಕೋತಿ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ಗಂಭೀರವಾಗಿ ಗಾಯಗೊಂಡ ಕೋತಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿತ್ತು. ಹಲವು ತಿಂಗಳುಗಳಿಂದ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಹಲವು ಬಾರಿ ಹಸುಗೂಸುಗಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದವು. ಇಂತಹ ಘಟನೆ ನಡೆದಿದ್ರೂ ನಗರಸಭೆ ಅಧಿಕಾರಿಗಳು ಮಾತ್ರ ಎಚ್ಚರಗೊಂಡಿಲ್ಲಾ ಅನಿಸುತ್ತೆ. ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸ್ಥಳೀಯರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಪಶು ಇಲಾಖೆಯ ಅಧಿಕಾರಿಗಳಿಗೆ ಹಲವು ಗಂಟೆಗಳಿಂದ ಸ್ಥಳೀಯರು ಫೋನ್ ಮಾಡಿದ್ರು ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೆ ಬೇಜಾಬ್ದಾರಿತನ ವರ್ತಿಸಿದ್ದಾರೆ. ಇದರಿಂದ ಮಾನವೀಯತೆ ಇಲ್ಲದ ಅಧಿಕಾರಿಗಳ ವಿರುದ್ಧವೂ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
https://www.youtube.com/watch?v=3qiWAXpVnVc