ನವದೆಹಲಿ: ಹಿಮಾಚಲ ಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ತಂಡದ ಪರ ಆಡುತ್ತಿರುವ ಗೌತಮ್ ಗಂಭೀರ್ ಕ್ಷಣ ಕಾಲ ನಿರ್ಲಕ್ಷ್ಯ ವಹಿಸಿ ರನೌಟ್ ಆಗಿದ್ದು, ಬಳಿಕ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ.
ಪಂದ್ಯದ 2ನೇ ಇನ್ನಿಂಗ್ಸ್‍ನಲ್ಲಿ 49 ರನ್ ಗಳಿಸಿ ಆಡುತ್ತಿದ್ದ ಗೌತಮ್ ಗಂಭೀರ್ ಅರ್ಧ ಶತಕ ಪೂರೈಸಲು ಅಂಚಿನಲ್ಲಿದ್ದರು. ಆದರೆ ಸ್ಟ್ರೈಕ್ ನಲ್ಲಿದ್ದ ರಿಷಿ ಧವನ್ 2 ಎರಡು ರನ್ ಕದಿಯುವ ಪ್ರಯತ್ನ ನಡೆಸಿದರು. ಆದರೆ ತಮ್ಮ ನಿರ್ಲಕ್ಷ್ಯದಿಂದ ಸುಲಭವಾಗಿ ಗಳಿಸಬೇಕಿದ್ದ ಸಮಯದಲ್ಲಿ ರನೌಟ್ ಆಗಿ ನಿರಾಸೆ ಮೂಡಿಸಿದ್ದರು.
Advertisement
https://twitter.com/NaaginDance/status/1062598130577764352?
Advertisement
ಆ ಬಳಿಕ ಟ್ವೀಟ್ ಮಾಡಿರುವ ಗಂಭೀರ್, ರಣಜಿ ಟ್ರೋಫಿ ಪಂದ್ಯದಲ್ಲಿ ಮಕ್ಕಳಂತೆ ಔಟಾಗುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿ ತಮ್ಮ ಕಾಲನು ತಾವೇ ಎಳೆದುಕೊಂಡಿದ್ದಾರೆ.
Advertisement
ಇದಕ್ಕು ಮುನ್ನ ಪಂದ್ಯದ ಹರಿಯಾಣ ವಿರುದ್ಧ ಮೊದಲ ಇನ್ನಿಂಗ್ಸ್‍ನಲ್ಲಿ ಅಂಪೈರ್ ನೀಡಿದ ಕೆಟ್ಟ ತೀರ್ಪಿಗೆ 44 ರನ್ ಗಳಿಸಿದ್ದ ಗಂಭೀರ್ ಬಲಿಯಾಗಿದ್ದರು. ಇನ್ನಿಂಗ್ಸ್‍ನ 17 ಓವರ್ ವೇಳೆ ಘಟನೆ ನಡೆದಿದ್ದು, ಮಯಾಂಕ್ ದಗರ್ ಬೌಲಿಂಗ್ ನಲ್ಲಿ ಡಿಫೆಂಡ್ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಚೆಂಡು ಮೇಲಕ್ಕೆ ಚಿಮ್ಮಿ ಸಿಲ್ಲಿ ಪಾಯಿಂಟ್ ನಲ್ಲಿದ್ದ ಖಂಡೂರಿ ಕೈಸೇರಿತ್ತು. ಹರಿಯಾಣ ಆಟಗಾರರ ಔಟ್ ಮನವಿಗೆ ಸಲ್ಲಿಸಿದ ಮರುಕ್ಷಣ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಈ ವೇಳೆ ಗಂಭೀರ್ ಮೈದಾನದಲ್ಲೇ ಅಂಪೈರ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
Advertisement
Anaiza to Aazeen: Didi, how did papa celebrate Children’s Day?
Aazeen replied: Well, today in the Ranji Trophy match he got run out like a kid!!!!
Papa: ???????????????????????????????????????? @natashagambhir2 #ChildrensDay pic.twitter.com/qUDKXgFYht
— Gautam Gambhir (@GautamGambhir) November 14, 2018
https://twitter.com/NaaginDance/status/1061857087758589952?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews