ಮುಂಬೈ: ಸಿನಿಮಾ ನಟ-ನಟಿಯರನ್ನು ಕಂಡರೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವುದು ಕಾಮನ್. ಇತ್ತೀಚಿಗೆ ರಿಶಿ ಕಪೂರ್ ತಮ್ಮ ಕುಟುಂಬದ ಜೊತೆ ರೆಸ್ಟೋರೆಂಟ್ ಗೆ ಹೋಗಿದ್ದಾಗ ಅಭಿಮಾನಿವೊಬ್ಬರು ಸೆಲ್ಫಿ ಕೇಳಿದ್ದಾರೆ. ಆದರೆ ರಿಶಿ ನೋ ಎಂದು ಅಭಿಮಾನಿಯ ಕಣ್ಣಲ್ಲಿ ನೀರು ಹಾಕಿಸಿದ್ದಾರೆ.
ಇತ್ತೀಚಿಗೆ ರಿಶಿ ಕಪೂರ್ ಪತ್ನಿ ನೀತು ಸಿಂಗ್, ಮಗ ರಣ್‍ಬೀರ್ ಕಪೂರ್, ಮಗಳು ರಿದ್ದೀಮಾ ಹಾಗೂ ಮೊಮ್ಮಗಳು ಸಮಾರಾ ಜೊತೆ ಬಾಂದ್ರಾದ ಪಾಶ್ ರೆಸ್ಟೋರೆಂಟ್ ಗೆ ಹೋಗಿದ್ದರು. ವರದಿಗಳ ಪ್ರಕಾರ ಮಹಿಳಾ ಅಭಿಮಾನಿ ರಿಶಿ ಅವರ ಹತ್ತಿರ ಸೆಲ್ಫಿಗಾಗಿ ಕೇಳಿಕೊಂಡಿದ್ದಾರೆ. ಆದರೆ ರಿಶಿ ‘ನೋ’ ಎಂದು ಅಭಿಮಾನಿಗೆ ಹೇಳಿದ್ದಾರೆ.
ಸೆಲ್ಫಿಗಾಗಿ ರಿಶಿ ಅವರು ನಿರಾಕರಿಸಿದ್ದಾಗ ಮಹಿಳೆ ನೀವು ತುಂಬಾ ‘ರೂಡ್’ ಎಂದು ಹೇಳಿದ್ದಾರೆ. ಇದನ್ನು ಕೇಳಿ ರೊಚ್ಚಿಗೆದ್ದ ರಿಶಿ ಕಪೂರ್ ನಿಮಗೆ ಅರ್ಥವಾಗುವುದಿಲ್ಲ. ನೀವು ತುಂಬಾ ‘ರೂಡ್’ ಎಂದು ಹೇಳಲು ನಿಮಗೆ ತುಂಬಾ ಸುಲಭ ಎಂದು ಹೇಳಿ ತಿರುಗೇಟು ನೀಡಿದರು.
ಆಗ ಸರಿಯಾದ ಸಮಯಕ್ಕೆ ರಣ್‍ಬೀರ್ ಕಪೂರ್ ಬಂದು ರಿಶಿ ಅವರನ್ನು ತಡೆದು ಕಾರಿನಲ್ಲಿ ತಮ್ಮ ಕುಟುಂಬದ ವಾಪಸ್ ಕಳುಹಿಸಿದ್ದರು.
ಈ ಹಿಂದೆ ಹಿರಿಯ ನಟಿ ಜಯಾ ಬಚ್ಚನ್ ಜೊತೆ ಅಭಿಮಾನಿವೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾಗ ಅವರ ಮೇಲೆ ಕೋಪಗೊಂಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
https://www.youtube.com/watch?v=oNAxDJGH_hI