ನವದೆಹಲಿ: ಆನೆಗಳ ವೀಡಿಯೋಗಳು ಸಾಮಾನ್ಯವಾಗಿ ಆಕರ್ಷಕವಾಗಿರುತ್ತೆ. ಅವುಗಳು ಮಾಡುವ ಮುದ್ಧದ ಕಳ್ಳತನವು ನೋಡುಗರಿಗೆ ಇಷ್ಟವಾಗುತ್ತೆ. ಆ ರೀತಿಯ ವೀಡಿಯೋ ನೋಡಲು ನೆಟ್ಟಿಗರು ಫುಲ್ ಖುಷ್ ಆಗುತ್ತಾರೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋವೊಂದು ನೆಟ್ಟಿಗರ ಆನಂದಕ್ಕೆ ಕಾರಣವಾಗಿದೆ. ಹಲಸು ತಿನ್ನಲು ಆನೆಯೊಂದು ಮಾಡಿದ ಸರ್ಕಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Advertisement
ಹಲಸಿನ ವಸನೆಗೆ ಬಂದರೆ ಎಲ್ಲ ಮನುಷ್ಯರು ಆ ಕಡೆಗೆ ಹೆಚ್ಚು ಆಕರ್ಷಕರಾಗುತ್ತಾರೆ. ಅದರಂತೆ ಆನೆ ಸಹ ಹಲಸಿನ ಮರದಲ್ಲಿ ಬಿಟ್ಟ ಹಣ್ಣಿನತ್ತ ಆಕರ್ಷಣೆಯಾಗಿದ್ದು, ಅದನ್ನು ಕಿತ್ತು ತಿನ್ನುವವರೆಗೂ ತನ್ನ ಪ್ರಯತ್ನವನ್ನು ಮಾತ್ರ ಬಿಟ್ಟಿಲ್ಲ. ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಸುಪ್ರಿಯಾ ಸಾಹು ಅವರು 30 ಸೆಕೆಂಡುಗಳ ಕ್ಲಿಪ್‍ನ ಆನೆಯ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧರಣಿ ಸತ್ಯಾಗ್ರಹ ನಿರತ ವಯೋವೃದ್ಧ ಏಕಾಏಕಿ ಅಸ್ವಸ್ಥ
Advertisement
Jackfruit is to Elephants what Mangoes are to humans.. and the applause by humans at the successful effort of this determined elephant to get to Jackfruits is absolutely heartwarming ????
video- shared pic.twitter.com/Gx83TST8kV
— Supriya Sahu IAS (@supriyasahuias) August 1, 2022
Advertisement
ವೀಡಿಯೋದಲ್ಲಿ ಏನಿದೆ?
ಆನೆ ಹಲಸಿನ ಮರದಲ್ಲಿದ್ದ ಹಣ್ಣನ್ನು ಕಂಡು ಮರವನ್ನು ಅಲುಗಿಸಿ ಬೀಳಿಸಲು ಪ್ರಯತ್ನ ಮಾಡುತ್ತೆ. ಆದರೆ ಆಗ ಹಣ್ಣು ಕೇಳಗೆ ಬೀಳುವುದಿಲ್ಲ. ನಂತರ ತನ್ನ ಎರಡು ಕಾಲುಗಳನ್ನು ಮೇಲಕ್ಕೆತ್ತಿ ಹಣ್ಣನ್ನು ತನ್ನ ಸೊಂಡಲಿನಿಂದ ಬೀಳಿಸಲು ಪ್ರಯತ್ನ ಮಾಡುತ್ತೆ. ಈ ಪ್ರಯತ್ನದಲ್ಲಿ ಕೊನೆಗೂ ಆನೆ ಯಶಸ್ವಿಯಾಗುವುದನ್ನು ನಾವು ನೋಡಬಹುದು. ಆನೆ ಯಶಸ್ವಿಯಾಗಿ ಹಲಸನ್ನು ಕಿತ್ತ ನಂತರ ವೀಡಿಯೋ ಮಾಡುತ್ತಿದ್ದವರು ಹರ್ಷದಿಂದ ಚಪ್ಪಾಳೆ ತಟ್ಟುತ್ತಿರುವುದನ್ನು ನಾವು ಕೇಳಿಸಿಕೊಳ್ಳಬಹುದು.
Advertisement
ವೀಡಿಯೋವನ್ನು ಪೋಸ್ಟ್ ಮಾಡಿದ ಸುಪ್ರಿಯಾ, ಹಲಸಿನ ಹಣ್ಣು ಆನೆಗಳಿಗೆ ಮಾವಿನ ಹಣ್ಣುಗಳು ಮನುಷ್ಯರಿಗೆ. ಹಲಸಿನ ಹಣ್ಣುಗಳನ್ನು ಪಡೆಯಲು ಈ ಆನೆಯ ಯಶಸ್ವಿ ಪ್ರಯತ್ನಕ್ಕೆ ಮಾನವರ ಚಪ್ಪಾಳೆ ಸಂಪೂರ್ಣವಾಗಿ ಹೃದಯಸ್ಪರ್ಶಿಯಾಗಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರಿಗಿಂತ ಇಡಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ: ಮೋದಿ ವಿರುದ್ಧ ಅಶೋಕ್ ಗೆಹ್ಲೋಟ್ ಕಿಡಿ
ಟ್ವಿಟ್ಟರ್‌ನಲ್ಲಿ ವೀಡಿಯೋ ನೋಡಿದ ನೆಟ್ಟಿಗರು, ಅಷ್ಟು ಎತ್ತರದವರೆಗೆ ಆನೆ ತನ್ನನ್ನು ತಾನು ವಿಸ್ತರಿಸಿಕೊಳ್ಳು ಪ್ರಚಂಡ ಶಕ್ತಿಯನ್ನು ಹೊಂದಿದೆ. ಒಂದೇ ಬಾರಿಗೆ ಮರವನ್ನು ಉರುಳಿಸುವ ಶಕ್ತಿಯೂ ಆನೆಗೆ ಇದೆ ಎಂದುಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ವೀಡಿಯೋ ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ.