ವಾಘಾ ಗಡಿ ಧ್ವಜ ವಂದನೆ ವೇಳೆ ಪಾಕ್ ಕ್ರಿಕೆಟಿಗನ ಹುಚ್ಚಾಟ! – ವಿಡಿಯೋ ನೋಡಿ

Public TV
1 Min Read
pak cricket 1

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವಿನ ವಾಘಾ ಗಡಿಯಲ್ಲಿ ಯೋಧರು ಸಾಂಪ್ರದಾಯಿಕವಾಗಿ ನಡೆಸುವ ಧ್ವಜ ವಂದನೆ ಕಾರ್ಯಕ್ರಮದ ವೇಳೆ ಪಾಕ್ ಕ್ರಿಕೆಟ್ ತಂಡದ ಆಟಗಾರ ಹಸನ್ ಅಲಿ ಅಗೌರವದಿಂದ ನಡೆದುಕೊಂಡಿದ್ದಾನೆ.

ಪಾಕ್ ಕ್ರಿಕೆಟ್ ತಂಡದ ಆಟಗಾರರು ವಾಘಾ ಗಡಿ ಪ್ರದೇಶದಲ್ಲಿ ನಡೆಯವ ಧ್ವಜ ವಂದನೆ ಕಾರ್ಯಕ್ರಮ ನೋಡಲು ಹಾಜರಾಗಿದ್ದ ವೇಳೆ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

DbT SWzX4AEsFq6

ಎಂದಿನಂತೆ ಭಾರತೀಯ ಗಡಿ ಭದ್ರತಾ ಪಡೆ ನಡೆಸುವ ಧ್ವಜ ವಂದನೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಹಸನ್ ಅಲಿ ಭಾರತೀಯ ಯೋಧರ ಕಡೆ ಮುಖ ಮಾಡಿ ತೊಡೆ ತಟ್ಟಿ ಹುಚ್ಚಾಟ ನಡೆಸಿದ್ದಾನೆ. ಈ ವೇಳೆ ಪಾಕ್ ಯೋಧರು ಆತನನ್ನು ತಡೆಯಲು ಸಹ ಯತ್ನಿಸದೇ ನಿಂತಿರುವುದು ಕಂಡು ಬಂದಿದೆ. ಪಾಕ್ ಆಟಗಾರನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ತಮ್ಮದೇ ಆದ ಅಭಿಪ್ರಾಯ ತಿಳಿಸಿ ಟ್ವೀಟ್ ಮಾಡುತ್ತಿದ್ದಾರೆ.

ಪಾಕ್ ಕ್ರಿಕೆಟ್ ಆಟಗಾರರು ಭಾರತೀಯರ ಅಭಿಮಾನವನ್ನು ಕೆಣಕುಕುವುದು ಇದೇ ಮೊದಲೆನಲ್ಲ. ಕಳೆದ ಕೆಲ ದಿನಗಳ ಹಿಂದೆ ಪಾಕ್ ಮಾಜಿ ಆಟಗಾರ ಶಹೀದ್ ಅಫ್ರಿದಿ ಸಹ ಜಮ್ಮು ಕಾಶ್ಮೀರ ವಿಷಯನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದರು.

ಪಾಕ್ ಆಟಗಾರು ಸದ್ಯ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಈ ಸರಣಿಯಲ್ಲಿ ಭಾಗವಹಿಸುವ ಮುನ್ನ ವಾಘಾ ಗಡಿಗೆ ಭೇಟಿ ನೀಡಲು ಅನುಮತಿ ನೀಡಬೇಕು ಎಂದು ಪಾಕ್ ಕ್ರಿಕೆಟ್ ಬೋರ್ಡ್ ಗೆ ಮನವಿ ಮಾಡಿದ್ದರು. ಮನವಿಯ ಹಿನ್ನೆಲೆಯಲ್ಲಿ ಪಾಕ್ ಆಟಗಾರರು ವಾಘಾ ಗಡಿ ಧ್ವಜ ವಂದನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

https://twitter.com/cricketer85/status/987702916197724160

Share This Article
Leave a Comment

Leave a Reply

Your email address will not be published. Required fields are marked *