ಪೊಲೀಸ್ ಅಧಿಕಾರಿ ಮಗನಿಂದ ಹುಡ್ಗಿಗೆ ಹಿಗ್ಗಾಮುಗ್ಗಾ ಥಳಿತ, ಮೊಣಕಾಲಿನಿಂದ ಮುಖಕ್ಕೆ ಪಂಚ್!

Public TV
2 Min Read
BOY 7

– ಆರೋಪಿಯ ಮೃಗೀಯ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್

ನವದೆಹಲಿ: ನಗರದ ಪೊಲೀಸ್ ಅಧಿಕಾರಿ ಅಶೋಕ್ ಸಿಂಗ್ ಅವರ ಮಗನೊಬ್ಬ ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸಿ ಕೂದಲು ಎಳೆದಾಡಿ, ಕಾಲಿನಿಂದ ಒದ್ದು, ಮೊಣಕಾಲಿನಿಂದ ಮುಖಕ್ಕೆ ಪಂಚ್ ಕೊಡುವ ಮೂಲಕ ವಿಕೃತಿ ಮೆರೆದ ಘಟನೆ ನಡೆದಿದೆ.

ಈ ಘಟನೆ ದೆಹಲಿಯ ತಿಲಕ್ ನಗರದಲ್ಲಿ ನಡೆದಿದ್ದು, ಆರೋಪಿಯನ್ನು ರೋಹಿತ್ ತೋಮರ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿ ಹುಡುಗಿಗೆ ಥಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 2ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಉತ್ತಮ್ ನಗರ ಪ್ರದೇಶದಲ್ಲಿದಲ್ಲಿರೋ ಬಿಪಿಒ ಆಫೀಸಿನಲ್ಲಿ ಈ ವಿಡಿಯೋ ರೆಕಾರ್ಡ್ ಆಗಿದೆ. ಈ ಆಫೀಸ್ ನ ಮಾಲೀಕ ರೋಹಿತ್ ಗೆಳೆಯನೇ ಆಗಿದ್ದಾನೆ. 21 ವರ್ಷದ ಆರೋಪಿ ರೋಹಿತ್ ನಿರುದ್ಯೋಗಿಯಾಗಿದ್ದು, ಇತ್ತೀಚೆಗಷ್ಟೇ ಬಿಪಿಓದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು ಅಂತ ಮೂಲಗಳಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಥಳಿತಕ್ಕೊಳಗಾದ ಹುಡುಗಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 506(ಬೆದರಿಕೆ) ಹಾಗೂ 354(ಮಹಿಳೆಯ ಮೇಲೆ ದೌರ್ಜನ್ಯ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಘಟನೆಯ ಬಗ್ಗೆ ಮಾತುಕತೆ ನಡೆಸಲು ಆರೋಪಿ ತಂದೆ ಅಶೋಕ್ ತೋಮರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅಶೋಕ್ ಅವರು ತಮ್ಮ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಸದ್ಯ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿಡಿಯೋದಲ್ಲೇನಿದೆ?:
ಆರೋಪಿಯು ಹುಡುಗಿಯ ಕೂದಲನ್ನು ಹಿಡಿದು ಎಳೆದುಕೊಂಡು ಬರುತ್ತಾನೆ. ಆಕೆಗೆ ಬೈಯುತ್ತಾ ಆಕೆಯ ಹೊಟ್ಟೆಗೆ ಕಾಲಿನಿಂದ ಒದೆಯುತ್ತಾನೆ. ಒದ್ದ ರಭಸಕ್ಕೆ ಹುಡುಗಿ ಕೆಳಗೆ ಬಿದ್ದು, ತನ್ನನ್ನು ಏನೂ ಮಾಡಬೇಡವೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದ್ರೆ ಆಕೆಯ ಮಾತನ್ನು ಲೆಕ್ಕಿಸದೆ ಆರೋಪಿ ಮನಬಂದಂತೆ ತನ್ನ ಕೈಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ.

ಬಳಿಕ ಬಿದ್ದಲ್ಲಿಂದ ಹುಡುಗಿ ಎದ್ದು ಕುಳಿತುಕೊಳ್ಳುವಾಗ ಮತ್ತೆ ಬೈಯುತ್ತಾ ಆಕೆಯ ಕೂದಲನ್ನು ಹಿಡಿದು ಎಳೆದಾಡಿಕೊಂಡು ನಡುಬಗ್ಗಿಸಿ ಬೆನ್ನಿಗೆ ತನ್ನ ಮುಂಗೈಯಿಂದ, ಮೊಣ ಕಾಲಿನಿಂದ ಹುಡುಗಿಯ ಮುಖಕ್ಕೆ ಒದೆಯುವ ಮೂಲಕ ತನ್ನ ರಾಕ್ಷಸ ಕೃತ್ಯ ಸೆಗಿದ್ದಾನೆ. ಇದೇ ವೇಳೆ ಪಕ್ಕದಲ್ಲಿ ಯುವಕನೊಬ್ಬ ಪಾಸಾಗುತ್ತಾನೆ. ಆದ್ರೆ ಆತ ಏನೂ ಮಾತಾಡದೆ ತನ್ನ ಪಾಡಿಗೆ ಆ ಕಡೆ ಈ ಕಡೆ ಹೋಗುತ್ತಾನೆ.

ಈ ಎಲ್ಲಾ ಘಟನೆಗಳನ್ನು ಪಕ್ಕದಲ್ಲೇ ಇದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಒಟ್ಟಿನಲ್ಲಿ ಆರೋಪಿ ಆ ಹುಡುಗಿಗೆ ಥಳಿಸಲು ಕಾರಣವೇನೆಂದು ತಿಳಿದುಬಂದಿಲ್ಲ. ಆದ್ರೆ ಈ ವಿಡಿಯೋ ನೋಡಿದ್ರೆ ಮನಕಲಕುತ್ತದೆ.

 ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *