ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಬೆಡಗಿ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಡೇಟಿಂಗ್ ನಲ್ಲಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಸದ್ಯ ದೀಪಿಕಾ ತನ್ನ ಮಾಜಿ ಗೆಳೆಯ ರಣ್‍ಬೀರ್ ಕಪೂರ್ ಫೋನ್ ನಿರೀಕ್ಷೆಯಲ್ಲಿದ್ದಾರೆ.
ಹೌದು, ಖುದ್ದು ದೀಪಿಕಾ ಈ ಮಾತನ್ನು ಹೇಳಿ ಅಭಿಮಾನಿಗಳಲ್ಲಿ ಗೊಂದಲ ಉಂಟು ಮಾಡಿದ್ದಾರೆ. ದೀಪಿಕಾ ಇತ್ತೀಚಿಗೆ ಕಾರ್ಯಕ್ರಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ನಿರೂಪಕ, ನೀವು ಶೂಟಿಂಗ್ ನಲ್ಲಿದಾಗ, ಗಂಟೆಗೊಂದು ಸಾರಿ ರಣ್‍ವೀರ್ ಫೋನ್ ಮಾಡ್ತಾರಾ ಎಂದು ಕೇಳಿದಾಗ ಇಲ್ಲ ಅದು ಕೇವಲ ಗಾಸಿಪ್ ಅಂತಾ ಉತ್ತರಿಸಿದ್ದಾರೆ.
Advertisement
ಮುಂದುವರೆದು ಏಕೆ ಅದು ಬೇರೆಯವರು ಕಾಲ್ ಆಗಿರಬಹುದಲ್ಲಾ ಎಂದು ಹೇಳಿದಾಗ ನಿರೂಪಕ ಸಡನ್ ಆಗಿ ಹಾಗಾದರೆ ರಣ್‍ಬೀರ್ ಅಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಹೌದು, ಇರಬಹುದು? ಅದು ರಣ್‍ಬೀರ್ ಕಾಲ್ ಯಾಕೆ ಆಗಿರಬಾರದು ಎಂದು ಹೇಳಿ ನೋಡುಗರ ಹುಬ್ಬೇರುವಂತೆ ಹೇಳಿದ್ದಾರೆ.
Advertisement
Advertisement
ದೀಪಿಕಾ ಈ ಹಿಂದೆ `ಕಾಫಿ ವಿಥ್ ಕರಣ್’ ಕಾರ್ಯಕ್ರಮದಲ್ಲಿ ತಮಗೆ ನಟ ರಣ್‍ಬೀರ್ ಮೋಸ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದರು. ಬ್ರೇಕ್ ಅಪ್ ಬಳಿಕ ಇಬ್ಬರೂ `ಯೇ ಜವಾನಿ ಹೈ ದಿವಾನಿ’ ಸಿನಿಮಾದಲ್ಲಿ ದೀಪಿಕಾ ಮತ್ತು ರಣ್‍ಬೀರ್ ಒಟ್ಟಾಗಿ ನಟಿಸಿದ್ದರು. ಚಿತ್ರವೂ ಅಭೂತಪೂರ್ವ ಗೆಲುವನ್ನು ಮತ್ತು ನೋಡುಗರಿಂದ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ನಂತರ ಮತ್ತೊಮ್ಮೆ `ತಮಾಶಾ’ ಸಿನಿಮಾದಲ್ಲಿ ಒಂದಾಗಿದ್ದರು.
Advertisement
ಇನ್ನೂ ಇತ್ತ `ಗೋಲಿಯೋಂ ಕೀ ರಾಸಲೀಲಾ: ರಾಮ್‍ಲೀಲಾ’ ಸಿನಿಮಾದಲ್ಲಿ ರಣ್‍ವೀರ್ ಸಿಂಗ್ ಜೊತೆ ನಟಿಸಿದ ಬಳಿಕ ಇಬ್ಬರೂ ಡೇಟ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಅದೇ ಕಾಫಿ ವಿಥ್ ಕರಣ್ ಶೋದಲ್ಲಿ ಒಮ್ಮೆ ರಣ್‍ವೀರ್ ಮತ್ತು ರಣ್‍ಬೀರ್ ಇಬ್ಬರೂ ಒಟ್ಟಾಗಿ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ನಿರೂಪಕ ಕರಣ್ ಜೋಹರ್ ನೇರವಾಗಿ ರಣ್‍ವೀರ್ ಗೆ ನಿಮಗೆ ಹಳೆದ ದೀಪಿಕಾ ಮತ್ತು ರಣ್‍ಬೀರ್ ಕಪೂರ್ ಬಗ್ಗೆ ಕೇಳಿಬಂದಿದ್ದ ಗಾಸಿಪ್ ಬಗ್ಗೆ ಏನು ಅನ್ನಿಸಲ್ಲವೇ ಅಂತಾ ಕೇಳಿದ್ದರು.
ಕರಣ್ ಪ್ರಶ್ನೆಗೆ ಉತ್ತರಿಸಿದ ರಣ್‍ವೀರ್, ಆ ವಿಷಯದ ಬಗ್ಗೆ ಆತಂಕ ಪಡುವಂತಹದು ಏನಿಲ್ಲ ಹಾಗೂ ಚಿಂತೆ ಮಾಡಲೇಬೇಕು ಎಂದೇನಿಲ್ಲ ಎಂದು ತಿಳಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಕರಣ್, ನಿಮಗೆ ರಣ್‍ವೀರ್ ಮತ್ತು ದೀಪಿಕಾ ಬಗ್ಗೆ ಏನು ಅನ್ನಿಸುತ್ತದೆ ಎಂದು ರಣ್‍ಬೀರ್ ಕಪೂರ್ ಗೆ ಪ್ರಶ್ನೆ ಮಾಡಿದ್ದರು. ಸ್ಕ್ರೀನ್ ಮೇಲೆ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬರುತ್ತದೆ. ನಿಜ ಜೀವನದಲ್ಲೂ ಇಬ್ಬರೂ ಜೊತೆಯಾಗಿರಲಿ. ಮುಂದೆ ಇಬ್ಬರಿಗೂ ಮುದ್ದಾದ ಮಕ್ಕಳು ಆಗಲಿ. ಇವರಿಬ್ಬರ ಮಕ್ಕಳು ಮುಂದೆ ನಟನೆ ಮಾಡಬೇಕು ಎಂದು ಉತ್ತರಿಸಿದ್ದರು.
https://www.instagram.com/p/BZqbswUg1ns/?taken-by=deepika.padukone.fanpage