ಲಕ್ನೋ: ಇಳಿವಯಸ್ಸಿನ ದಂಪತಿ ತಮ್ಮ ವೈವಾಹಿಕ ವಿವಾದವನ್ನು ಲಡ್ಡು ತಿನ್ನಿಸುವ ಮೂಲಕ ಕೊನೆಗೊಳಿಸಿದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ಈ ಅಚ್ಚರಿ ಸುದ್ದಿ ನಡೆದಿದೆ. ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಇಳಿವಯಸ್ಸಿನ ದಂಪತಿ ಪೊಲೀಸರ ಸಮ್ಮುಖದಲ್ಲಿ ಒಬ್ಬರಿಗೊಬ್ಬರು ಲಡ್ಡು ತಿನ್ನಿಸುವ ಮೂಲಕ ತಮ್ಮ ದಾಂಪತ್ಯ ಕಲಹಕ್ಕೆ ಮುಕ್ತಯವಾಡಿದ್ದಾರೆ. ಇದನ್ನೂ ಓದಿ: ಸಂತೋಷ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರಿಂದಲೇ ಹೈಡ್ರಾಮಾ
दादा-दादी का झगड़ा हुआ और थाने तक पहुँच गया, अब समझौता देखिए।❤️????
खूबसूरत वीडिओ????#Love #Respect pic.twitter.com/VyV9wSH9Vg
— SACHIN KAUSHIK (@upcopsachin) April 13, 2022
ಏನಿದು ಘಟನೆ?
ದಂಪತಿ ತಮ್ಮ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬಂದು ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದನ್ನು ತಿಳಿದ ಗ್ರಾಮಸ್ಥರು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಪೊಲೀಸರು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿ ಎಪ್ಪತ್ತರ ಹರೆಯ ದಂಪತಿಯನ್ನು ಒಂದು ಮಾಡಿದ್ದಾರೆ.
ಇಳಿವಯಸ್ಸಿನ ಮಹಿಳೆ ತನ್ನ ಪತಿಗೆ ಲಡ್ಡು ತಿನ್ನಿಸುತ್ತಿರುವ ದೃಶ್ಯ ಕ್ಲೈಮ್ಯಾಕ್ಸ್‌ನಲ್ಲಿ ಸೆರೆಹಿಡಿಯಲಾಗಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು, ಮುದ್ದಾದ ವೀಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಸಂತೋಷ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆಗ್ರಹ
ಅದರಲ್ಲಿಯೂ ಈ ವೀಡಿಯೋ ಕೊನೆಯಲ್ಲಿ ಹೆಂಡತಿಗೆ ಲಡ್ಡು ತಿನ್ನಿಸುವಾಗ ಇಳಿವಯಸ್ಸಿನ ಪತಿ ನನ್ನ ಕೈಯನ್ನು ಕಚ್ಚಬೇಡ ಎಂದು ಹೇಳುತ್ತಾರೆ. ಇದು ಅಲ್ಲಿ ನೆರೆದಿಂದ ಜನರನ್ನು ನಗಿಸುವಂತೆ ಮಾಡುತ್ತೆ. ಒಟ್ಟಿನಲ್ಲಿ ವೀಡಿಯೋದಲ್ಲಿರುವ ಈ ಮುದ್ದಾದ ಜೋಡಿ ನೋಡಿ ಎಂಜಯ್ ಮಾಡುತ್ತಿದ್ದಾರೆ.