ರಾಜ್‍ಕೋಟ್: ವೇಗವಾಗಿ ಬಂದ ಕಾರೊಂದು ಬಂಕ್ ನ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿಕೊಂಡು ಆಟೋಗೂ ಗುದ್ದಿರುವ ಆಘಾತಕಾರಿ ಅಪಘಾತವೊಂದು ನಗರದಲ್ಲಿ ನಡೆದಿದೆ.
ಇಡೀ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿರುವುದರಿಂದ ಘಟಕ ಮುರಿದು ಬಿದ್ದಿದೆ. ನಂತರ ಆಟೋಕ್ಕೆ ಗುದ್ದಿ ಆಟೋ ಮಗಚಿ ಬಿದ್ದಿದೆ. ಈ ಅಪಘಾತದಲ್ಲಿ ಮೂರು ಜನರು ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
Advertisement
ಕಾರ್ ವೇಗವಾಗಿ ಬಂದು ವಿತರಣಾ ಘಟಕಕ್ಕೆ ಡಿಕ್ಕಿಯಾಗಿದ್ದರಿಂದ ಪೆಟ್ರೋಲ್ ಚೆಲ್ಲಿತ್ತು. ಇದರಿಂದ ಗಾಬರಿಗೊಂಡ ಆಟೋ ಚಾಲಕ ಸ್ಥಳದಿಂದ ಓಡಿ ಹೋಗಿದ್ದಾರೆ. ಕಾರು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.
Advertisement
ಮಂಗಳವಾರ ಬ್ರೇಕ್ ಫೈಲ್ಯೂರ್ ಮತ್ತು ಸ್ಟೇರಿಂಗ್ ಲಾಕ್ ಆದ ಕಾರಣ ನಿಯಂತ್ರಣ ತಪ್ಪಿದ ಕೆಎಸ್‍ಆರ್ ಟಿಸಿ ಬಸ್ಸೊಂದು ಪೆಟ್ರೋಲ್ ಬಂಕ್ ಒಳಗೆಯೇ ನುಗ್ಗಿತ್ತು. ಬೆಂಗಳೂರಿನ ಗೊರಗುಂಟೆ ಪಾಳ್ಯ ಎಚ್‍ಪಿ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ಸಂಭವಿಸಿತ್ತು.
Advertisement
ಕೆಎಸ್‍ಆರ್ ಟಿಸಿ ಬಸ್ ಹಾಸನದಿಂದ ಬೆಂಗಳೂರಿಗೆ ಬರುತ್ತಿತ್ತು. ಬಸ್ ಗೊರಗುಂಟೆಪಾಳ್ಯ ಸಿಗ್ನಲ್ ದಾಟಿದ ನಂತರ ಬ್ರೇಕ್ ವೈಫಲ್ಯವಾಗಿದ್ದ ಕಾರಣ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ನೇರವಾಗಿ ಎಚ್‍ಪಿ ಪೆಟ್ರೋಲ್ ಬಂಕ್ ಒಳಗೆ ನುಗ್ಗಿದೆ.
Advertisement
ಬಸ್ಸಿನಲ್ಲಿ ಒಟ್ಟು 11 ಮಂದಿ ಪ್ರಯಾಣಿಕರಿದ್ದರು. ಸದ್ಯ ಈ ಅವಘಡದಿಂದ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಪೆಟ್ರೋಲ್ ಹಾಕುವ ಕ್ಯಾಬಿನ್ ಪೈಪ್ ಲೈನ್, ಕಾಂಪೌಂಡ್ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.
https://www.youtube.com/watch?v=n34rplpjNRs
#WATCH: A car rams into a petrol dispenser and a commercial autorickshaw at a petrol pump in Rajkot in Gujarat, injuring three people. (Source: CCTV) pic.twitter.com/oEF77sQSbu
— ANI (@ANI) June 13, 2018