ಮುಂಬೈ: ರೈಲ್ವೆ ಪೊಲೀಸ್ ಫೋರ್ಸ್ (ಆರ್‍ಪಿಎಫ್) ಪೇದೆಯೊಬ್ಬರು ತಮ್ಮ ಸಮಯಪ್ರಜ್ಞೆಯಿಂದ 7 ವರ್ಷದ ಬಾಲಕನ ಪ್ರಾಣ ಕಾಪಾಡಿದ ಘಟನೆ ಕಳೆದ ಶುಕ್ರವಾರ ಮುಂಬೈನಲ್ಲಿ ನಡೆದಿದೆ.
ಆರ್‍ಪಿಎಫ್ ಪೇದೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಚಲಿಸುತ್ತಿದ್ದ ರೈಲಿನಡಿ ಸಿಲುಕದಂತೆ ಬಾಲಕನನ್ನ ರಕ್ಷಿಸಿದ್ದಾರೆ. ಪೇದೆ ಓಡಿಬಂದು ಪ್ಲಾಟ್‍ಫಾರ್ಮ್ ಮತ್ತು ರೈಲಿನ ನಡುವಿನ ಸಂದಿಯಲ್ಲಿ ಸಿಲುಕಿದ್ದ ಬಾಲಕನನ್ನ ಕಾಪಾಡುವ ವಿಡಿಯೋವನ್ನ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
ವರದಿಗಳ ಪ್ರಕಾರ 7 ವರ್ಷದ ಬಾಲಕ ತನ್ನ ತಾಯಿಯ ಜೊತೆ ಪ್ರಯಾಣಿಸುತ್ತಿದ್ದ. ರೈಲು ನಿಲ್ದಾಣಕ್ಕೆ ಬಂದು ನಿಂತಾಗ ಇಬ್ಬರೂ ಸೆಂಕೆಂಡ್ ಕ್ಲಾಸ್ ಜನರಲ್ ಕಂಪಾರ್ಟ್‍ಮೆಂಟ್‍ಗೆ ಹೋಗಲು ನಿರ್ಧರಿಸಿದ್ದರು. ಮೊದಲಿಗೆ ತಾಯಿ ಹೇಗೋ ರೈಲು ಏರಿದ್ರು. ಬಾಲಕ ತಾಯಿಯನ್ನ ಹಿಂಬಾಲಿಸಿದ್ದು, ಅಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತ್ತು. ಹೀಗಾಗಿ ಬಾಲಕ ಕಾಲು ಜಾರಿ ರೈಲು ಹಾಗೂ ಪ್ಲಾಟ್‍ಫಾರ್ಮ್ ನಡುವಿನ ಸಂದಿಯಲ್ಲಿ ಸಿಲುಕಿದ್ದ.
ಕೂಡಲೇ ಆರ್‍ಪಿಎಫ್ ಪೇದೆ ಸುನಿಲ್ ನಾಪಾ ಬಾಲಕನ ಬಳಿಗೆ ಓಡಿಹೋಗಿದ್ದು, ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಇತರೆ ಪ್ರಯಾಣಿಕರು ಕೂಡ ಅವರ ಸಹಾಯಕ್ಕೆ ಬಂದಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
#WATCH Railway Protection Force personnel saves a boy from falling under a moving train at Naigaon railway station in Mumbai (2.2.18) pic.twitter.com/So8En2GkzI
— ANI (@ANI) February 5, 2018