ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯದಲ್ಲಿ ಚೆನ್ನೈ 22 ರನ್ ಗಳ ಜಯ ಪಡೆದಿದ್ದು, ಸಿಎಸ್‍ಕೆ ಬೌಲರ್ ಗಳ ಶಿಸ್ತು ಬದ್ಧ ದಾಳಿಗೆ ಪಂಜಾಬ್ ಸೋಲುಂಡಿತು. ಇದಕ್ಕೂ ಮುನ್ನ ಪಂದ್ಯದಲ್ಲಿ ಕೆಎಲ್ ರಾಹುಲ್ ಅಚ್ಚರಿಯ ರೀತಿಯಲ್ಲಿ ರನೌಟ್ ನಿಂದ ಪಾರಾಗಿದ್ದರು.
ಪಂದ್ಯದ 13ನೇ ಓವರಿನಲ್ಲಿ ಕೆಎಲ್ ರಾಹುಲ್ ಸ್ಟ್ರೈಕ್ ಎದುರಿಸಿ ಜಡೇಜಾ ಬೌಲಿಂಗ್‍ನಲ್ಲಿ ರನ್ ಕದಿಯುವ ಯತ್ನ ಮಾಡಿದರು. ವಿಕೆಟ್ ಹಿಂದಿದ್ದ ಧೋನಿ ತಕ್ಷಣ ಚೆಂಡು ಪಡೆದು ತಮ್ಮದೇ ರೀತಿಯಲ್ಲಿ ರನೌಟ್ ಮಾಡಲು ಯತ್ನಿಸಿದರು. ಆದರೆ ಧೋನಿ ಎಸೆತ ಚೆಂಡು ವಿಕೆಟಿಗೆ ತಾಕಿದರೂ ಕೂಡ ಬೇಲ್ಸ್ ಹಾರದ ಪರಿಣಾಮ ರನೌಟ್ ನಿಂದ ರಾಹುಲ್ ಸೇಫ್ ಆದ್ರು. ಈ ಹಿಂದೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೂಡ ಬೌಲ್ಡ್ ಆಗಿದ್ದರು ಕೂಡ ಬೇಲ್ಸ್ ಹಾರದ ಕಾರಣ ನಾಟೌಟ್ ಆಗಿದ್ದರು.
Advertisement
WATCH: Déjà vu – Dhoni creates magic, but bails still don't fall
????????https://t.co/w0KupuOmZ4 #CSKvKXIP pic.twitter.com/RFii3hcxqS
— IndianPremierLeague (@IPL) April 6, 2019
Advertisement
ಪಂಜಾಬ್ ತಂಡದ ಪರ ಕೆಎಲ್ ರಾಹುಲ್ 55 ರನ್, ಸರ್ಫರಾಜ್ ಖಾನ್ 67 ರನ್ ಗಳಿಸಿದ್ದು ಬಿಟ್ಟರೆ ಬೇರೆ ಆಟಗಾರರು ಉತ್ತಮ ಪ್ರದರ್ಶನ ನೀಡಲು ವಿಫಲವಾದ ಕಾರಣ ಪಂಜಾಬ್ 5 ವಿಕೆಟ್ ಕಳೆದುಕೊಂಡು 138 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಪರ ಹರ್ಭಜನ್, ಸ್ಕಾಟ್ ಕಗ್ಲಿಜಿನ್ ತಲಾ 2 ವಿಕೆಟ್ ಪಡೆದರೆ, ಚಹಲ್ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಧೋನಿ 37 ರನ್, ಡುಪ್ಲೆಸಿಸ್ 54 ರನ್ ಗಳ ನೆರವಿನಿಂದ ಚೆನ್ನೈ 3 ವಿಕಟ್ ಕಳೆದುಕೊಂಡು 160 ರನ್ ಗಳಿಸಿತ್ತು.
Advertisement
WATCH: Thala Dhoni effect? When even bails refused to fall
????????https://t.co/ccTyMBLToc #CSKvRR
— IndianPremierLeague (@IPL) March 31, 2019