ಭೋಪಾಲ್: ದ್ವಿ ಚಕ್ರವಾಹನ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿ ಚಕ್ರವಾಹನದಲ್ಲಿದ್ದ ಮೂವರು ಮಹಿಳೆಯರು ಗಾಳಿಯಲ್ಲಿ ಹಾರಿ ನೆಲಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಟಿಕಾಮ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದ್ವಿ ಚಕ್ರವಾಹನ ಚಲಾಯಿಸುತ್ತಿದ್ದ ಮಹಿಳೆ ಎಸ್‍ಯುವಿ ಕಾರ್‍ವೊಂದನ್ನ ಓವರ್‍ಟೇಕ್ ಮಾಡುವ ವೇಳೆ ಅವಘಡ ಸಂಭವಿಸಿದೆ.
Advertisement
ಎಸ್‍ಯುವಿ ಕಾರಿನ ಹಿಂದೆ ಬರುತ್ತಿದ್ದ ಮಹಿಳೆ ಕಾರನ್ನು ಹಿಂದಿಕ್ಕಲು ಮುಂದಾಗಿದ್ದಾಳೆ. ರಸ್ತೆ ಚಿಕ್ಕದಾದ ಕಾರಣ ಎದುರು ಬರುವ ಗಾಡಿಗಳು ಕಾಣಿಸಿರಲಿಲ್ಲ. ಓವರ್‍ಟೇಕ್ ಮಾಡುವ ವೇಳೆ ಮುಂದುಗಡೆ ಬರುತ್ತಿದ್ದ ಮಾರುತಿ ಎರ್ಟಿಗಾ ಕಾರಿಗೆ ಮಹಿಳೆಯ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಾಲಕಿ ಸೇರಿದಂತೆ ಮೂವರು ಮಹಿಳೆಯರೂ ಕೂಡ ಮೇಲೆ ಹಾರಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ದ್ವಿ ಚಕ್ರವಾಹನದಲ್ಲಿದ್ದ ಮೂವರು ಮಹಿಳೆಯರು ಹೆಲ್ಮೆಟ್ ಧರಿಸಿರಲಿಲ್ಲ. ಇಬ್ಬರು ಬಿದ್ದ ತಕ್ಷಣ ಮೇಲೆದ್ದಿದ್ದಾರೆ. ನಂತರ ಮೂರನೇ ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಕೂಡ ಮಹಿಳೆಯರ ರಕ್ಷಣೆಗೆ ಮುಂದಾಗಿದ್ದಾರೆ.
Advertisement
ಸುದ್ದಿ ಸಂಸ್ಥೆ ಈ ಅಪಘಾತದ ವಿಡಿಯೋ ಬಿಡುಗಡೆ ಮಾಡಿದ್ದು, ಎಲ್ಲಾ ಮೂವರು ಮಹಿಳೆಯರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
Advertisement
#WATCH: CCTV footage of collision b/w a car & a two-wheeler in MP's Tikamgarh; 3 girls on the two-wheeler survived the collision. pic.twitter.com/tjL7SboKjz
— ANI (@ANI) September 22, 2017