ಇಸ್ಲಾಮಾಬಾದ್: ವಿಶ್ವದ ಬಹುತೇಕ ಕ್ರಿಕೆಟ್ ತಂಡಗಳು ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದರೆ ಪಾಕಿಸ್ತಾನ ಆಟಗಾರರು ಮಾತ್ರ ಬಿರಿಯಾನಿ ಸವಿಯುತ್ತಾ ಕುಳಿತಿರುವ ಬಗ್ಗೆ ಮಾಜಿ ಬೌಲರ್ ವಾಸೀಂ ಅಕ್ರಂ ಕ್ರಿಕೆಟಿಗರ ವಿರುದ್ಧ ಗರಂ ಆಗಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆಟಗಾರರ ಫಿಟ್ನೆಸ್ ಬಹು ಮುಖ್ಯವಾಗಿದ್ದು, ಇಂದಿಗೂ ಕೂಡ ಪಾಕ್ ತನ್ನ ಆಟಗಾರರಿಗೆ ಊಟದಲ್ಲಿ ಬಿರಿಯಾನಿ ನೀಡುತ್ತಿದೆ. ಬಿರಿಯಾನಿ ತಿನ್ನುತ್ತಾ ಕುಳಿತುಕೊಂಡರೆ ಚಾಂಪಿಯನ್ ತಂಡಗಳ ವಿರುದ್ಧ ಗೆಲುವು ಸಾಧಿಸಲು ಆಗುವುದಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಫಿಟ್ನೆಸ್ ಕುರಿತು ಹಲವು ಆಟಗಾರರು ವಿಮರ್ಶೆ ಮಾಡಿ ಕಿಡಿಕಾರಿದ್ದರು. ಈಗ ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಪಾಕ್ ಕ್ರಿಕೆಟ್ ತಂಡ ಕುರಿತು ಅಕ್ರಂ ಕಿಡಿಕಾರಿದ್ದಾರೆ.
ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ತರಬೇತಿಗೆ ಕ್ಯಾಂಪ್ ನಡೆಸಿದ್ದು, 23 ಆಟಗಾರರಿಗೆ ತರಬೇತಿ ನೀಡುತ್ತಿದೆ. ಆದರೆ ಇದೇ ವೇಳೆ ಅವರಿಗೆ ಪೂರೈಕೆ ಮಾಡುತ್ತಿದ್ದ ಊಟ ಮೆನುವಿನಲ್ಲಿ ಬಿರಿಯಾನಿ ನೀಡಿದೆ. ಉಳಿದಂತೆ ಏಪ್ರಿಲ್ 18 ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಶ್ವಕಪ್ ಗೆ ತಂಡವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
Wasim Akram "Pakistani players are still being served biryani and you cannot compete against champions by feeding them biryani" #Cricket
— Saj Sadiq (@SajSadiqCricket) April 7, 2019