ಮುಂಬೈ: ಎಂ.ಎಸ್ ಧೋನಿ (MS Dhoni) ಆರ್‌ಸಿಬಿ (RCB) ಕ್ಯಾಪ್ಟನ್ ಆಗಿದ್ದಿದ್ದರೆ ಆರ್‌ಸಿಬಿ ತಂಡ ಮೂರು ಬಾರಿ ಐಪಿಎಲ್ ಕಪ್ (Indian Premier League Title) ಗೆಲ್ಲುತ್ತಿತ್ತು ಎಂದು ಪಾಕಿಸ್ತಾನ (Pakistan) ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.
ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2008ರಲ್ಲಿ ಐಪಿಎಲ್ ಆರಂಭಗೊಂಡಾಗಿನಿಂದಲೂ ಆರ್‌ಸಿಬಿ ಈವರೆಗೆ ಒಮ್ಮೆಯೂ ಕಪ್ ಗೆದ್ದಿಲ್ಲ. 2009ರಲ್ಲಿ ಡೆಕ್ಕನ್ ಚಾರ್ಜಸ್, 2011ರಲ್ಲಿ ಚೆನ್ನೈಸೂಪರ್ ಕಿಂಗ್ಸ್ (CSK) ಹಾಗೂ 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತು. ಆದ್ರೆ ಧೋನಿ ಆರ್‌ಸಿಬಿ ನಾಯಕನಾಗಿ ಇರುತ್ತಿದ್ದರೆ ಮೂರು ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುತ್ತಿತ್ತು ಎಂದು ವಾಸಿಂ ಅಕ್ರಮ್ (Wasim Akram) ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ನನ್ನ ಫೇವ್ರೆಟ್ – ʻಈ ಸಲ ಕಪ್ ನಮ್ದೆʼ ಅಂತಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ
ಆರ್‌ಸಿಬಿ ತಂಡಕ್ಕೆ ಅಷ್ಟೊಂದು ಸಪೋರ್ಟ್ ಇದೆ. ವಿಶ್ವದ ಅಗ್ರ ಬ್ಯಾಟ್ಸ್‌ಮ್ಯಾನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಟೀಂ ನಲ್ಲಿ ಇದ್ದಾರೆ. ಆದರೂ ಈವರೆಗೆ ಕಪ್ ಗೆಲ್ಲೂಕೆ ಸಾಧ್ಯವಾಗಿಲ್ಲದೇ ಇರೋದು ದುರದೃಷ್ಟಕರ ಎಂದಿದ್ದಾರೆ. ಇದನ್ನೂ ಓದಿ: IPL 2023: RCB ನನ್ನ ಹೆಮ್ಮೆಯ ತಂಡ – ಇಂದಲ್ಲ ನಾಳೆ ಕಪ್ ನಮ್ದೆ ಎಂದ ಸಿದ್ದರಾಮಯ್ಯ
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ತಂಡ 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಮುಂಬೈ, ಪಂಬಾಜ್ ಕಿಂಗ್ಸ್ ಸಹ 10 ಅಂಕಗಳೊಂದಿಗೆ ಕ್ರಮವಾಗಿ 6, 7ನೇ ಸ್ಥಾನದಲ್ಲಿದೆ. ಆದ್ರೆ ಬ್ಯಾಟಿಂಗ್ ಪಡೆಯ ಸಮಸ್ಯೆ ಎದುರಿಸುತ್ತಿರುವ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲು ಕನಿಷ್ಠ 4ರಲ್ಲಿ 3 ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ. ಈಗಾಗಲೇ 11ರಲ್ಲಿ 8 ಪಂದ್ಯ ಗೆದ್ದಿರುವ ಗುಜರಾತ್ ಟೈಟಾನ್ಸ್ ಬಹುತೇಕ ಪ್ಲೆ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಸಿಎಸ್‌ಕೆ 6ರಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ.