ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಸಿಲಿಕಾನ್ ಸಿಟಿ, ಉದ್ಯಾನನಗರಿ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ದೇಶ ವಿದೇಶಗಳಿಂದ ವಿದ್ಯಾಭ್ಯಾಸಕ್ಕೆ ಎಂದು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಇಂತಹ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಗಾಗ ಕಸದ ಸಮಸ್ಯೆ ಕಾಣಿಸಿಕೊಂಡು ಗಾರ್ಬೇಜ್ ಸಿಟಿ ಆಗುತ್ತಿದೆ ಎಂದು ಟೀಕೆಗಳು ಕೇಳಿ ಬರುತ್ತಾನೆ ಇರುತ್ತೆ. ಅದಕ್ಕೆ ತಕ್ಕಂತೆ ಬಿಬಿಎಂಪಿ ಕೂಡ ಸ್ಪಂದಿಸದೇ ಛೀಮಾರಿ ಹಾಕಿಸಿಕೊಳ್ಳುತ್ತಿರುತ್ತೆ. ಅತಂಹದ್ದೆ ಒಂದು ಘಟನೆ ಈಗ ನಡೆದಿದೆ.
Advertisement
ಬಿಬಿಎಂಪಿ ಮಾಡಬೇಕಾದ ಕಾರ್ಯವನ್ನು ವಿದೇಶದಿಂದ ವಿದ್ಯಾಭ್ಯಾಸಕ್ಕೆ ಎಂದು ಬಂದ ವಿದ್ಯಾರ್ಥಿಗಳು ಮಾಡಿದ್ದಾರೆ. ದಿನಬೆಳಗಾದ್ರೆ ಹೆಬ್ಬಾಳ ಫ್ಲೈಓವರ್ ಆಧಾರ ಸ್ತಂಭಗಳ ಮೇಲೆ ಧೂಳು ಬಿದ್ದು ಹಾಳಾಗುತ್ತಾ ಬಂದಿದೆ. ಬಿಬಿಎಂಪಿ ಸ್ವಚ್ಛತೆ ಮಾಡುವಂತ ಕೆಲಸ ಮುಂದಾಗಲಿಲ್ಲ. ಬದಲಾಗಿ ವಾಷಿಂಗ್ಟನ್ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅಂಗವಾಗಿ ಇಂಟರ್ನ್‍ಶಿಪ್ ಮಾಡಲು ಬೆಂಗಳೂರು ನಗರಕ್ಕೆ ಆಗಮಿಸಿದ್ದು, ಆ ವಿದ್ಯಾರ್ಥಿಗಳು ಹೆಬ್ಬಾಳ ಫ್ಲೈಓವರ್ ಅನ್ನು ಸ್ವಚ್ಛ ಮಾಡಿದ್ದಾರೆ.
Advertisement
ವಾಷಿಂಗ್ಟನ್ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅಂಗವಾಗಿ ಇಂಟರ್ನ್ ಶಿಪ್ ಮಾಡಲು ಬೆಂಗಳೂರು ನಗರಕ್ಕೆ ಆಗಮಿಸಿದ್ದು. ಅದರಡಿ ಇಂದು ''ದಿ ಅಗ್ಲಿ ಇಂಡಿಯನ್'' ಸಹಯೋಗದಲ್ಲಿ ಹೆಬ್ಬಾಳ ಮೇಲ್ಸೇತುವೆಯ ಆಧಾರ ಸ್ತಂಭ(ಪಿಲ್ಲರ್)ಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. pic.twitter.com/mUh048hURa
— Rakesh Singh IAS (@BBMPAdmn) January 21, 2020
Advertisement
“ದಿ ಅಗ್ಲಿ ಇಂಡಿಯನ್” ಸಹಯೋಗದಲ್ಲಿ ಹೆಬ್ಬಾಳ ಮೇಲ್ಸೇತುವೆಯ ಆಧಾರ ಸ್ತಂಭ(ಪಿಲ್ಲರ್)ಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕೆಲ ಸಂಘಟನೆಗಳು ಪಾಲಿಕೆ ಜೊತೆ ಕೈ ಜೋಡಿಸಿ ಕಾರ್ಯನಿರ್ವಹಿಸುತ್ತಿವೆ. 3 ಗಂಟೆಗಳಲ್ಲಿ ಮೇಲ್ಸೇತುವೆಗೆ ಬಣ್ಣ ಬಳಿದು ಅವುಗಳಿಗೆ ಹೊಸ ಮೆರಗು ನೀಡಿ ಸುಂದರಗೊಳಿಸಿದ್ದಾರೆ. ವಿದೇಶಿ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಮೇಯರ್ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
Advertisement
Greatly appreciate the efforts of interns from Washington University and @theuglyindian volunteers who beautified the 6 pillars of Hebbal flyover in just 3 hrs. My gratitude to all the civic groups and volunteers who are working hand in hand with #BBMP to keep #Bengaluru clean! pic.twitter.com/cssVBFCceF
— Rakesh Singh IAS (@BBMPAdmn) January 21, 2020