ಮುಂಬೈ: 2023ರ ಐಪಿಎಲ್ (IPL 2023) ಆವೃತ್ತಿಯಲ್ಲಿ ಪ್ಲೇ ಆಫ್ ಹಾದಿ ಕಠಿಣವಾಗಿಸಿಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಂಡಿರಜ್ಜು ಗಾಯಕ್ಕೆ (Hamstring Injury) ತುತ್ತಾಗಿರುವ ಕಾರಣ ತಂಡದ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
???? INJURY UPDATE ????
Washington Sundar has been ruled out of the IPL 2023 due to a hamstring injury.
Speedy recovery, Washi ???? pic.twitter.com/P82b0d2uY3
— SunRisers Hyderabad (@SunRisers) April 27, 2023
Advertisement
ಈ ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಹೈದರಾಬಾದ್ ತಂಡ ಮಂಡಿರಜ್ಜು ಗಾಯದಿಂದಾಗಿ ವಾಷಿಂಗ್ಟನ್ ಸುಂದರ್ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ ಎಂದು ತಿಳಿಸಿದೆ. ಜೊತೆಗೆ ಆದಷ್ಟು ಬೇಗ ಗುಣಮುಖರಾಗಿ ವಾಷಿ ಎಂದು ಹಾರೈಸಿದೆ. ಇದನ್ನೂ ಓದಿ: ನಾವು ಸೋಲೋದಕ್ಕೆ ಅರ್ಹರು – ಕಿಂಗ್ ಕೊಹ್ಲಿ ಹತಾಶೆ
Advertisement
Advertisement
16ನೇ ಆವೃತ್ತಿಯ ಐಪಿಎಲ್‌ನಲ್ಲಿ ವಾಷಿಂಗ್ಟನ್ ಸುಂದರ್ ಕಳೆ ಫಾರ್ಮನ್ನೇ ಮುಂದುವರಿಸಿದ್ದಾರೆ. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಕೊನೆಯ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ 4 ಓವರ್‌ಗಳಿಗೆ 28 ರನ್ ನೀಡಿದ್ದ ವಾಷಿಂಗ್ಟನ್, ಬ್ಯಾಟಿಂಗ್‌ನಲ್ಲಿ 15 ಎಸೆತಗಳಲ್ಲಿ 24 ರನ್‌ಗಳನ್ನು ಸಿಡಿಸಿದ್ದರು. ಇದರ ಹೊರತಾಗಿಯೂ ಈ ಪಂದ್ಯದಲ್ಲಿ ಹೈದರಾಬಾದ್ ಸೋತಿತ್ತು.
Advertisement
ಈ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ ವಾಷಿಂಗ್ಟನ್ ಸುಂದರ್ 60 ರನ್ ಗಳಿಸಿ, ಕೇವಲ 3 ವಿಕೆಟ್ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ್ದ ಬ್ರಿಯಾನ್ ಲಾರಾ, ವಾಷಿಂಗ್ಟನ್ ಸುಂದರ್ ಅದ್ಭುತ ಆಲ್‌ರೌಂಡರ್ ಆಗಬೇಕೆಂದು ಫ್ರಾಂಚೈಸಿ ಬಯಸುತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ: ನಮ್ಮ ಬ್ಲಡ್ ಗ್ರೂಪ್ RCB ಪಾಸಿಟಿವ್ – ಫ್ಯಾನ್ಸ್ ಪೋಸ್ಟರ್ ವೈರಲ್
ಈಗಾಗಲೇ 7 ಪಂದ್ಯಗಳನ್ನಾಡಿರುವ ಹೈದರಾಬಾದ್ ತಂಡ ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿ 4 ಅಂಕಗಳೊಂದಿಗೆ 9ನೇ ಸ್ಥಾನಕ್ಕೆ ಕುಸಿದಿದೆ. ಒಂದು ವೇಳೆ ಪ್ಲೆ ಆಫ್ ತಲುಪಬೇಕೆಂದರೂ ಉಳಿದ 7ರಲ್ಲಿ 6 ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ.