ಲಂಡನ್: ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್‍ನಲ್ಲಿ ಆಡುತ್ತಿರುವ ಟೀಂ ಇಂಡಿಯಾ ಆಟಗಾರರಾದ ಚೇತೇಶ್ವರ ಪೂಜಾರ, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿ ಭರ್ಜರಿ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ.
Advertisement
ಟೀಂ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯ ಪೂಜಾರ ಇದೀಗ ಸಸೆಕ್ಸ್ ತಂಡದ ನಾಯಕರಾಗಿದ್ದು, ಮಿಡೆಕ್ಸ್ ವಿರುದ್ಧದ ಪಂದ್ಯದಲ್ಲಿ ಪೂಜಾರ 231 ರನ್ (403 ಎಸೆತ, 21 ಬೌಂಡರಿ, 3 ಸಿಕ್ಸ್) ಬಾರಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ಲೀಗ್‍ನಲ್ಲಿ ಫ್ರಾಂಚೈಸಿ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್
Advertisement
Welcome to county cricket, @Sundarwashi5! ????????????
???? #RedRoseTogether https://t.co/IAqOFBpukS pic.twitter.com/MbFIQUpX5u
— Lancashire Cricket (@lancscricket) July 20, 2022
Advertisement
ಇತ್ತ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆಲ್‍ರೌಂಡರ್ ವಾಷಿಂಗ್ಟನ್ ಸುಂದರ್ ಕೌಂಟಿ ಕ್ರಿಕೆಟ್‍ನಲ್ಲಿ ನಾರ್ಥಾಂಪ್ಟನ್‍ಶೈರ್ ತಂಡದ ಪರ ಆಡುತ್ತಿದ್ದು, ಲಂಕಾಶೈರ್ ವಿರುದ್ಧದ ಪಂದ್ಯದಲ್ಲಿ 22 ಓವರ್ ಎಸೆದು 1 ಮೇಡನ್ ಓವರ್ ಸಹಿತ 5 ವಿಕೆಟ್ ಕಿತ್ತು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕರಾವಳಿಯ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ
Advertisement
Pure quality ⚡ @navdeepsaini96 has put on a show in his first @KentCricket outing ✋ #LVCountyChamp pic.twitter.com/UxJbZFUZqE
— LV= Insurance County Championship (@CountyChamp) July 20, 2022
ಕೆಂಟ್ ತಂಡದ ಪರ ಆಡುತ್ತಿರುವ ಇನ್ನೋರ್ವ ಟೀಂ ಇಂಡಿಯಾ ವೇಗಿ ನವದೀಪ್ ಸೈನಿ ವಾರ್ವಿಕ್‍ಷೈರ್ ವಿರುದ್ಧದ ಪಂದ್ಯದಲ್ಲಿ 18 ಓವರ್ ಎಸೆದು 4 ಮೇಡನ್ ಓವರ್ ಸಹಿತ 5 ವಿಕೆಟ್ ಪಡೆದಿದ್ದಾರೆ.
ಈ ಮೂವರು ಆಟಗಾರರು ಕೂಡ ಮತ್ತೆ ಟೀಂ ಇಂಡಿಯಾ ಪರ ಕಂಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಪೂಜಾರ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತವಾದರೆ, ಸೈನಿ ಮತ್ತು ಸುಂದರ್ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ತಂಡಕ್ಕೆ ಎಂಟ್ರಿಕೊಟ್ಟು ಹೊರ ಹೋಗುತ್ತಿದ್ದಾರೆ. ಮುಂದಿನ ಟಿ20 ವಿಶ್ವಕಪ್‍ಗೂ ಮುನ್ನ ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಇವರಿಬ್ಬರು ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.