ವಾಷಿಂಗ್ಟನ್: ದಿನೇ ದಿನೇ ಕೊರೊನಾ ವೈರಸ್ ಅಟ್ಟಹಾಸ ವಿಶ್ಯಾದ್ಯಂತ ಹೆಚ್ಚಾಗುತ್ತಲೇ ಇದೆ. ಜಗತ್ತಿನಾದ್ಯಂತ 35 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 2.48 ಲಕ್ಷ ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ.
ವಿಶ್ವಾದ್ಯಂತ 35,66,330 ಮಂದಿಗೆ ಈವರೆಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಅಲ್ಲದೇ 11,54,072 ಮಂದಿ ಸೊಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು 212 ರಾಷ್ಟ್ರಗಳು ಹಾಗೂ ಪ್ರಾಂತ್ಯಗಳು ಕೊರೊನಾ ಹಾವಳಿಗೆ ತತ್ತರಿಸಿ ಹೋಗಿವೆ. ಈವರೆಗೆ ಒಟ್ಟು 2,48,286 ಮಂದಿ ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಅಮೆರಿಕ ಒಂದರಲ್ಲೇ ಕಳೆದ 24 ಗಂಟೆಗಳಲ್ಲಿ 10,550 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಒಟ್ಟು 11,88,122 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈವರೆಗೆ 68,598 ಮಂದಿ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ. ಇತ್ತ ಸ್ಪೇನ್‍ನಲ್ಲಿ ಸೋಂಕಿತರ ಸಂಖ್ಯೆ 2,47,122ಕ್ಕೆ ಏರಿಕೆಯಾಗಿದೆ. ಹಾಗೆಯೇ ಇಟಲಿಯಲ್ಲಿ 2,10,717 ಮಂದಿಗೆ ಸೋಂಕು ತಗುಲಿದೆ. ಬ್ರಿಟನ್‍ನಲ್ಲಿ 1,86,599, ಫ್ರಾನ್ಸ್ ನಲ್ಲಿ 1,68,693, ಜರ್ಮನಿಯಲ್ಲಿ 1,65,664 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ವರದಿಯಾಗಿದೆ.
ಇತ್ತ ಭಾರತದಲ್ಲಿ 42,533 ಮಂದಿಗೆ ಸೋಂಕು ತಗುಲಿದ್ದು, 1,391 ಮಂದಿ ಕೊರೊನಾ ವೈರಸ್ ಸೊಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಒಟ್ಟು 11,775 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗೆಯೇ ಪಾಕಿಸ್ತಾನದಲ್ಲಿ 20,084 ಸೋಂಕು ಪತ್ತೆಯಾಗಿದ್ದು, 457 ಮಂದಿ ಸಾವನ್ನಪ್ಪಿದ್ದಾರೆ.