ಗುಜರಾತಿನ ವಡೋದರಾದ 24 ವರ್ಷದ ಹುಡುಗಿ ಕ್ಷಮಾ ಬಿಂದು, ತನ್ನನ್ನು ತಾನೇ ಮದುವೆಯಾಗಿ, ವಿಚಿತ್ರ ಸುದ್ದಿಯಾಗಿದ್ದಳು. ಮದುವೆಯ ವ್ಯಾಖ್ಯಾನ ಬದಲಾಗಿದ್ದರೂ ಹುಡುಗ, ಹುಡುಗಿಯನ್ನು ಅಥವಾ ಹುಡುಗಿ ಹುಡುಗಿಯನ್ನು ಇಲ್ಲವೆ ಹುಡುಗ ಹುಡುಗನನ್ನು ಮದುವೆ ಆಗಿದ್ದಿದೆ. ಆದರೆ, ತನ್ನನ್ನು ತಾನೇ ಮದುವೆ ಆಗುವುದು ಎಂದರೆ ಏನು? ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು
ತನಗೆ ತಾನೇ ಮದುವೆ ಆಗಿ ಭಾರೀ ಸುದ್ದಿ ಆಗಿರುವ ಕ್ಷಮಾ ಬಿಂದು, ಈಗಾಗಲೇ ತನ್ನನ್ನೇ ತಾನು ಮದುವೆಯಾಗಿ ಗೋವಾಗೆ ಹನಿಮೂನಿಗೂ ರೆಡಿಯಾಗಿದ್ದಾರೆ. ಈ ವಿಚಿತ್ರ ಮದುವೆಯ ಬಗ್ಗೆ ಓದಿದವರು ತಲೆಕೆಡಿಸಿಕೊಂಡು ಕೂತಿದ್ದರು. ಭಾರತದಲ್ಲಿ ಇಂತಹ ಮದುವೆ ಇದೇ ಮೊದಲಾಗಿದ್ದರಿಂದ, ಆ ಹುಡುಗಿಯ ಮಾನಸಿಕವಾಗಿ ಸರಿಯಿದ್ದಾಳಾ? ಅನ್ನುವ ಪ್ರಶ್ನೆ ಕೂಡ ಹಾಕಿದ್ದರು. ಆದರೆ, ಆ ಹುಡುಗಿಗೆ ಇಂತಹ ಐಡ್ಯಾ ಹೇಗೆ ಬಂತು? ಎನ್ನುವ ಹುಡುಕಾಟದಲ್ಲಿ ಸಿಕ್ಕಿ ಉತ್ತರ ಸಿನಿಮಾಗಳೇ.
ಭಾರತದಲ್ಲಿ ತನ್ನನ್ನು ತಾನೇ ಮದುವೆ ಆಗುವ ಸಿನಿಮಾಗಳು ಬರದೇ ಹೋದರೂ, ಬಾಲಿವುಡ್ ನಲ್ಲಿ ಕೆಲವು ವೆಬ್ ಸಿರೀಸ್ ಮತ್ತು ಸಿನಿಮಾಗಳು ತೆರೆ ಕಂಡಿವೆ. ರೋಸಾಸ್ ವೆಡ್ಡಿಂಗ್, ಗ್ಲೀ, ದಿ ಎಕ್ಸೆಸ್, ಜೂಲ್ಯಾಂಡರ್ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಮತ್ತು ಟಿವಿ ಸೀರಿಸ್ ಗಳಲ್ಲಿ ಸೊಲೊಗಾಮಿ ಕಥೆಯಿದೆ. ತನ್ನನ್ನು ತಾನು ಮದುವೆ ಆಗುವುದಕ್ಕೆ ಇಂಗ್ಲಿಷಿನಲ್ಲಿ ಬಳಸುವ ಪದ ಸೊಲೊಗಾಮಿ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ
ಬಹುಶಃ ಇಂತಹ ಸಿನಿಮಾಗಳಿಂದ ಪ್ರೇರೇಪಿತಗೊಂಡ ಕ್ಷಮಾ ಬಿಂದು, ಅಂಥದ್ದೊಂದು ನಿರ್ಧಾರ ತಗೆದುಕೊಂಡಿರಬಹುದು ಎನ್ನಲಾಗುತ್ತಿದೆ. ಇಲ್ಲದಿದ್ದರೆ, ಇಂತಹ ಕಾನ್ಸೆಪ್ಟ್ ಅವಳ ತಲೆಯಲ್ಲಿ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ.