ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್‌? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?

Public TV
2 Min Read
PAk

ಹೈದರಾಬಾದ್‌: ಏಕದಿನ ವಿಶ್ವಕಪ್‌ (ODI World Cup) ಟೂರ್ನಿಯ ಆರಂಭಕ್ಕೂ ಮುನ್ನವೇ ಸುದ್ದಿಯಲ್ಲಿದ್ದ ಪಾಕಿಸ್ತಾನ (Pakistan) ತಂಡ ಇದೀಗ ಮತ್ತೆ ನೆಟ್ಟಿಗರ ಬಾಯಿಗೆ ಆಹಾರವಾಗಿದೆ. ವಿಶ್ವಕಪ್‌ ಟೂರ್ನಿಯ ಎರಡೂ ಅಭ್ಯಾಸ ಪಂದ್ಯಗಳಲ್ಲಿ 300ಕ್ಕೂ ಅಧಿಕ ರನ್‌ ಬಾರಿಸಿದರೂ ಸೋಲಿನಿಂದ ಕಂಗೆಟ್ಟಿದ್ದ‌ ಪಾಕ್‌ ತಂಡ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ.

ಹೌದು. ಹೈದರಾಬಾದ್‌ನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 345 ರನ್‌ಗಳ ಗುರಿ ತಲುಪುವ ಮೂಲಕ ವಿಶ್ವದಾಖಲೆಯ ಜಯಗಳಿಸಿದ ಪಾಕಿಸ್ತಾನ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಪಂದ್ಯದ ವೇಳೆ ತಂಡದ ಆಟಗಾರರು ಬೌಂಡರಿ ಗೆರೆಯ ವಿಚಾರದಲ್ಲಿ ಕಳ್ಳಾಟವಾಡುತ್ತಿದ್ದಾರೆ ಅನ್ನೋ ಬಗ್ಗೆ ಜಾಲತಾಣದಲ್ಲಿ ಚರ್ಚೆಗಳು ಹುಟ್ಟಿಕೊಂಡಿವೆ.

ಮಂಗಳವಾರ ಲಂಕಾ ವಿರುದ್ಧ ತನ್ನ 2ನೇ ಪಂದ್ಯವನ್ನಾಡಿದ ಪಾಕಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಲಂಕಾ ತಂಡ ಪಾಕ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾದಿದ್ದರು. ಲಂಕಾ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಸಾಲ್‌ ಮೆಂಡೀಸ್‌ (Kusal Mendis) ಹಾಗೂ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಮರವಿಕ್ರಮ ಶತಕ ಸಿಡಿಸಿ ಮಿಂಚಿದರು. ಮೆಂಡಿಸ್‌ 77 ಎಸೆತಗಳಲ್ಲಿ 122 ರನ್‌ (6 ಸಿಕ್ಸರ್‌, 14 ಬೌಂಡರಿ) ಚಚ್ಚಿದರೆ, ಸಮರವಿಕ್ರಮ 2 ಸಿಕ್ಸರ್‌, 11 ಬೌಂಡರಿಗಳೊಂದಿಗೆ 89 ಎಸೆತಗಳಲ್ಲಿ 108 ರನ್‌ ಗಳಿಸಿ ಔಟಾದರು. ಇದರೊಂದಿಗೆ ಆರಂಭಿಕ ಆಟಗಾರ ಪಾತುಮ್‌ ನಿಸಾಂಕ ಸಹ 61 ಎಸೆತಗಳಲ್ಲಿ 51 ರನ್‌ ಬಾರಿಸಿದ್ದರು.

ಕೇವಲ 65 ಎಸೆತಗಳಲ್ಲಿ ಶತಕ ಸಿಡಿಸಿ ಇನ್ನಷ್ಟು ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ್ದ ಕುಸಾಲ್‌ ಮೆಂಡೀಸ್‌, ಪಾಕ್‌ ಬೌಲರ್‌ಗಳನ್ನು ಕಂಗಲಾಗುವಂತೆ ಮಾಡಿದ್ದರು. ಆದ್ರೆ ಲಂಕಾ ಇನ್ನಿಂಗ್ಸ್​ನ 29ನೇ ಓವರ್​ನಲ್ಲಿ (28.5 ಓವರ್‌) ಹಸನ್ ಅಲಿ ಎಸೆತದಲ್ಲಿ ಸಿಕ್ಸರ್‌ ಬಾರಿಸಲು ಯತ್ನಿಸಿದಾಗ ಡೀಪ್ ಮಿಡ್ ವಿಕೆಟ್​ನ ಬೌಂಡರಿ ಲೈನ್ ಬಳಿ ಕ್ಯಾಚ್‌ ಆಗಿ, ಮೆಂಡೀಸ್‌ ಔಟಾದರು. ಫೀಲ್ಡಿಂಗ್‌ನಲ್ಲಿದ್ದ ಇಮಾಮ್ ಉಲ್ ಹಕ್ ( Imam-ul-Haq) ಈ ಕ್ಯಾಚ್ ಹಿಡಿದ ಬಳಿಕ ನೆಲಕ್ಕೆ ಉರುಳಿದರು, ಈ ಕುರಿತ ಫೋಟೋಗಳು ವೈರಲ್‌ ಆದ ಬಳಿಕ ಪಾಕ್‌ ವಿರುದ್ಧ ಟೀಕೆಗಳ ಅಲೆ ಎದ್ದಿದೆ. ಪಾಕಿಸ್ತಾನದ ಆಟಗಾರರು ಮೋಸದಾಟವಾಡಿ ಲಂಕಾವನ್ನೂ ಸೋಲಿಸಿತ್ತಾ ಅನ್ನೋ ಪ್ರಶ್ನೆಯೂ ಹುಟ್ಟುಕೊಂಡಿದೆ.

ಏಕೆಂದರೆ ಇಮಾಮ್‌ ಕ್ಯಾಚ್‌ ಹಿಡಿದು ನೆಲಕ್ಕುರುಳಿದಾಗ ಅವರು ಬೌಂಡರಿ ಹಗ್ಗದ ಗುರುತನ್ನು ಸ್ಪರ್ಶಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ. ಹೀಗಾಗಿ ಯಾರೋ ಬೌಂಡರಿ ಲೈನ್ ಅನ್ನು ಹಿಂದಕ್ಕೆ ಸರಿಸಿದಂತೆ ತೋರುತ್ತಿತ್ತು. ಆ ಬಳಿಕ ಇಮಾಮ್ ಹಿಡಿದ ಕ್ಯಾಚ್​ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೀಲ್ಡಿಂಗ್‌ನಲ್ಲಿ ಪಾಕಿಸ್ತಾನ ತಂಡ ಕಳ್ಳಾಟ ಆಡುತ್ತಿದ್ದೆ ಎಂದು ಕ್ರಿಕೆಟ್‌ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ನೆದರ್ಲೆಂಡ್ಸ್‌ ವಿರುದ್ಧ ಮೊದಲ ಪಂದ್ಯವಾಡಿದಾಗಲೂ ಪಾಕ್‌ ತಂಡದ ವಿರುದ್ಧ ಇದೇ ಟೀಕೆಗಳು ಕೇಳಿಬಂದಿತ್ತು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article