ಗಾಂಧಿನಗರ: ಸಾರ್ವಜನಿಕ ಸಭೆ ವೇಳೆ ದಲಿತ ಮುಖಂಡ ( Dalit leader) ಮತ್ತು ಗುಜರಾತ್‍ನ ವಡ್ಗಾಮ್(Vadgam) ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ( Jignesh Mevani ) ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
Vadgam MLA Jignesh Mevani attacked by Gujarat’s ex home minister Pradipsinh Jadega’s goon at a public meeting in Ahmedabad’s Vastral area in presence of police.
-social media team pic.twitter.com/28Ya74q0e3
— Jignesh Mevani (@jigneshmevani80) September 12, 2022
Advertisement
ಈ ಕುರಿತಂತೆ ಜಿಗ್ನೇಶ್ ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ ಅವರ ಬೆಂಬಲಿಗರು, ಈ ದಾಳಿಯನ್ನು ರಾಜ್ಯದ ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರಿಗೆ ಸೇರಿದ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೊಹಿನೂರ್ ವಜ್ರ ಜಗನ್ನಾಥ ದೇವರಿಗೆ ಸೇರಿದ್ದು; ಬ್ರಿಟನ್‌ನಿಂದ ವಾಪಸ್ ತರಿಸಿ – ರಾಷ್ಟ್ರಪತಿಗೆ ಮನವಿ
Advertisement
वस्त्राल के नर्मदा अपार्टमेंट में @jigneshmevani80 व हमारी सभा चल रही थी, सभा में पूर्व गृह मंत्री @PradipsinhGuj के आदमी लाभु देसाई द्वारा हमला किया गया और सभा बर्खास्त करने के लिए जबरजस्ती की गई। पुलिस की उपस्थिति में हुआ ये हमला, गुजरात में क़ानून व्यवस्था की स्थिति दर्शाता है pic.twitter.com/tNK5FKs9iI
— Hitendra Pithadiya हितेंद्र હિતેન્દ્ર ہٹندر ???????? (@HitenPithadiya) September 12, 2022
Advertisement
ದಾಳಿ ವೇಳೆ ಅಹಮದಾಬಾದ್‍ನ ವಸ್ತ್ರಾಲ್‍ನಲ್ಲಿರುವ ನರ್ಮದಾ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಮೇವಾನಿ ಮತ್ತು ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಹಿತೇಂದ್ರ ಪಿತಾಡಿಯಾ(Hitendra Pithadiya) ಉಪಸ್ಥಿತರಿದ್ದರು. ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬೆಂಕಿಗಾಹುತಿಯಾದ ಕಾರು – ಸಹಾಯಕ್ಕೆ ಧಾವಿಸಿದ ಮಹಾರಾಷ್ಟ್ರ ಸಿಎಂ
Advertisement
ಮತ್ತೊಂದೆಡೆ ಈ ಘಟನೆ ಸಂಬಂಧ ಹಿತೇಂದ್ರ ಪಿತಾಡಿಯಾ ಅವರು ಟ್ವೀಟ್ ಮಾಡಿದ್ದು, ಪ್ರದೀಪ್‍ಸಿನ್ಹ್ ಜಡೇಜಾ(Pradipsinh Jadeja) ಅವರ ಗೂಂಡಾ ಲಾಭು ದೇಸಾಯಿ, ಜಿಗ್ನೇಶ್ ಮೇವಾನಿ ಮೇಲೆ ದಾಳಿ ಮಾಡಿ ಸಭೆಯನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಪೊಲೀಸರ ಸಮ್ಮುಖದಲ್ಲಿಯೇ ದಾಳಿ ನಡೆಸಲಾಗಿದೆ ಎಂದು ಹೇಳುವ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನಿಸಿದ್ದಾರೆ.