ಕಾರವಾರ: ನಿವೃತ್ತ ಡಿಜಿಪಿ ಓಂ ಪ್ರಕಾಶ್ (Om Prakash) ಬರ್ಬರ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಾಡಿದ ಆಸ್ತಿಯೂ ಕಾರಣವಾಯ್ತ ಎಂಬ ಅನುಮಾನ ಇದೀಗ ದಟ್ಟವಾಗಿದೆ.
ಓಂ ಪ್ರಕಾಶ್ ಅವರು 1996ರಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಇವರ ಸಹೋದರಿ ಜೋಯಿಡಾದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಪರಿಸರಕ್ಕೆ ಮನಸೋತಿದ್ದ ಅವರು 2011-12ರ ನಡುವೆ ಸಾಮಜೋಯಿಡಾದಲ್ಲಿ 2 ಎಕ್ರೆ 17 ಗುಂಟೆ ಜಮೀನು ಖರೀದಿಸಿದ್ದರು. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್ ಪತ್ನಿ ಅರೆಸ್ಟ್
ಜೊತೆಗೆ ಜೋಯಿಡಾ (Joida) ತಾಲೂಕಿನ ಗಣೇಶ ಗುಡಿಯ ಬಾಡಗುಂದ (Badagunda) ಗ್ರಾಮದಲ್ಲಿ 17 ಎಕ್ರೆ ಜಮೀನು ಖರೀದಿ ಮಾಡಿದ್ದು, ಈ 2 ಜಮೀನನ್ನು ಮಗ ಕಾರ್ತೀಕೇಶ್ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದ 17 ಎಕ್ರೆಯಲ್ಲಿ 10 ಎಕ್ರೆ ಬೇರೆಯವರ ಹೆಸರಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್ ಪತ್ನಿ
ಸಾಮಜೋಯಿಡಾದಲ್ಲಿ ಗಂಧ, ಸಾಗುವಾನಿ ಸೇರಿದಂತೆ ವಾಣಿಜ್ಯ ಬೆಳೆಯನ್ನು ಬೆಳೆದಿದ್ದು, ಇಲ್ಲಿಯೇ ಗೆಸ್ಟ್ ಹೌಸ್ ನಿರ್ಮಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದಲ್ಲಿದ್ದ 5 ಎಕ್ರೆ ಜಮೀನನ್ನು ರಿವರ್ ರಾಫ್ಟಿಂಗ್ ಮಾಡಲು ಲೀಸ್‌ಗೆ ನೀಡಿದ್ದರು. ಉಳಿದ 10 ಎಕ್ರೆ ಜಮೀನನ್ನು ಬೇನಾಮಿ ಇಟ್ಟಿದ್ದು, ಈ ಜಮೀನನ್ನು ತನ್ನ ಸಹೋದರಿಯ ಹೆಸರಿಗೆ ಮಾಡಲು ಸಿದ್ಧರಾಗಿದ್ದರು. ಈ ವಿಚಾರಕ್ಕೆ ಪತ್ನಿ ಹಾಗೂ ಮಗಳ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಇದನ್ನೂ ಓದಿ: ಕೇವಿಯರ್ ಡಿಸ್ಟ್ರಿಬ್ಯೂಷನ್‌ನಲ್ಲಿ ವಿಶ್ವದಲ್ಲೇ ಮುಂಚೂಣಿ – ರಿಕ್ಕಿ ರೈ ಆಸ್ತಿ ಎಷ್ಟಿದೆ?
ಮನೆಯಲ್ಲಿ ಕಿತ್ತಾಟ ಜಾಸ್ತಿಯಾದಾಗ ಜೋಯಿಡಾದ ಗೆಸ್ಟ್ ಹೌಸ್‌ಗೆ ಬಂದು ಇಲ್ಲಿನ ಗೆಳೆಯರು ಜೊತೆ ಸಮಯ ಕಳೆಯುತ್ತಿದ್ದರು. ಓಂ ಪ್ರಕಾಶ್ ಅವರು ಬಹುತೇಕ ಎಲ್ಲೇ ಹೋದರೂ ಪತ್ನಿಯನ್ನು ಬಿಟ್ಟು ಬರುತಿದ್ದರು. ಅಷ್ಟೇ ಅಲ್ಲದೇ ಅವರು ಮಾನಸಿಕವಾಗಿ ನೊಂದಿದ್ದರು ಬಗ್ಗೆ ಅವರ ಸಹವರ್ತಿಗಳು ಹೇಳಿದ್ದಾರೆ.