ನವದೆಹಲಿ: ಕೆಲ ದಿನಗಳ ಹಿಂದೆ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಟೀಂ ಇಂಡಿಯಾ ಹಿರಿಯ ಆಟಗಾರ ಗೌತಮ್ ಗಂಭೀರ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ವಿಫಲತೆ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಗಂಭೀರ್, 2012ರ ಆಸ್ಟ್ರೇಲಿಯಾದಲ್ಲಿ ಕಾಮನ್‍ವೆಲ್ತ್ ಬ್ಯಾಂಕ್(ಸಿಬಿ) ಸರಣಿಯ ಆಟಗಾರರ ಆಯ್ಕೆ ವೇಳೆ ಧೋನಿ ಅನುಸರಿಸಿದ ನೀತಿಯ ಕುರಿತು ಟೀಕೆ ಮಾಡಿದ್ದಾರೆ.
Advertisement
ಸರಣಿಯಲ್ಲಿ ಸೆಹ್ವಾಗ್ ಹಾಗೂ ಸಚಿನ್‍ರೊಂದಿಗೆ ನನ್ನನ್ನು ಆಡಿಸಲು ಆಗುವುದಿಲ್ಲ ಎಂದು ಅಂದು ತಂಡದ ನಾಯಕತ್ವ ವಹಿಸಿದ್ದ ಎಂಎಸ್ ಧೋನಿ ಹೇಳಿದ್ದರು ಎಂಬ ಸಂಗತಿಯನ್ನು ರಿವೀಲ್ ಮಾಡಿರುವ ಗಂಭೀರ್, 2015ರ ವಿಶ್ವಕಪ್‍ಗೆ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಧೋನಿ ಈ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ. ಆದರೆ ಸರಣಿಯಲ್ಲಿ ಗೆಲುವು ಪಡೆಯಲು ತಂಡ ಹೆಣಗಾಡಿದ ಬಳಿಕ ಧೋನಿ ಈ ತೀರ್ಮಾನದಿಂದ ಹಿಂದೆ ಸರಿದರು. ಈ ವೇಳೆ ನನಗೆ ಒನ್ ಡೌನ್ ಬ್ಯಾಟ್ಸ್ ಮನ್ ಆಗಿ ಆಡಲು ಅವಕಾಶ ನೀಡಿದ್ದರು ಎಂದು ಧೋನಿಯ ನಾಯಕತ್ವದ ನಿರ್ಧಾರದ ಬಗ್ಗೆ ಟೀಕೆ ಮಾಡಿದ್ದಾರೆ.
Advertisement
Advertisement
ಧೋನಿ ತಮ್ಮ ತಪ್ಪಿನ ಅರಿವಾದ ಬಳಿಕ ತೀರ್ಮಾನ ಬದಲಿಸಿದ್ದರು. ಆದರೆ ಯಾವುದೇ ಒಂದು ವಿಷಯದಲ್ಲಿ ನಿರ್ಧಾರ ಕೈಗೊಂಡ ಬಳಿಕ ಆ ನಿರ್ಧಾರದಿಂದ ಹಿಂದೆ ಸರಿಯಬಾರದು. ಆದರೆ ಅಂದು ಧೋನಿ ಕೈಗೊಂಡ ನಿರ್ಧಾರ ನನಗೆ ದೊಡ್ಡ ಶಾಕ್ ಆಗಿತ್ತು. ಏಕೆಂದರೆ 2012ರಲ್ಲೇ 2015 ವಿಶ್ವಕಪ್ ಕಾರಣ ಹೇಳಿ ನನಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದ್ದರು ಎಂದು ಅಂದಿನ ಡ್ರೆಸ್ಸಿಂಗ್ ರೂಂ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
Advertisement
ಯಾವುದೇ ಒಬ್ಬ ಆಟಗಾರನಿಗೆ ಮೈದಾನದಲ್ಲಿ ರನ್ ಗಳಿಸುವ ಕೌಶಲ್ಯವಿದ್ದರೆ ಆತ ಬಯಸಿದಂತೆ ಆಟವನ್ನು ಮುಂದುವರಿಸಬಹುದು. ಇದನ್ನೇ ನಾವು ಆಸ್ಟ್ರೇಲಿಯಾ ಸರಣಿಯಲ್ಲಿ ತಿಳಿಸಿಕೊಂಡೆವು. ನಾನು ಸೇರಿದಂತೆ ಮೂವರು ಆಟಗಾರರು ಒಟ್ಟಿಗೆ ಆಡಬೇಕಿತ್ತು. ಅಂದು ಧೋನಿ ರೊಟೇಷನ್ ಕಾರಣ ನೀಡಿ ನನಗೆ ಅವಕಾಶ ನೀಡಲಿಲ್ಲ. ಆ ಬಳಿಕ ನಡೆದ ಪಂದ್ಯದಲ್ಲಿ ಸಚಿನ್ ಹಾಗೂ ಸೆಹ್ವಾಗ್ ಆರಂಭಿಕರಾಗಿ ಕಣಕ್ಕೆ ಇಳಿದರೆ, ನಾನು 3 ಹಾಗೂ ಕೊಹ್ಲಿ 4ನೇ ಕ್ರಮಾಂಕದಲ್ಲಿ ಅಡಿದೆವು. ಈ ಪಂದ್ಯದಲ್ಲಿ ಟೀಂ ಇಂಡಿಯಾ 37 ಓವರ್ ಗಳಲ್ಲೇ ಜಯ ಪಡೆದಿತ್ತು ಎಂದು ಉದಾಹಣೆ ಕೂಡ ನೀಡಿದ್ದಾರೆ.
ಧೋನಿ ಮೊದಲು ನಮ್ಮ ಮೂವರು ಆಟಗಾರರೊಂದಿಗೆ ಒಟ್ಟಿಗೆ ಆಡದಿರಲು ನಿರ್ಧರಿಸಿದ್ದರು. ಅಂದು ಧೋನಿ ರೊಟೇಷನ್ ಕಾರಣ ನೀಡಿ ನನಗೆ ಅವಕಾಶ ನೀಡಲಿಲ್ಲ. ಬಳಿಕ ನಿರ್ಧಾರ ಬದಲಿಸಿದ್ದರು. ಇದರ ಅರ್ಥ ಮೊದಲು ತೆಗೆದುಕೊಂಡ ನಿರ್ಧಾರ ತಪ್ಪು ಎಂದು ಅಥವಾ 2ನೇ ನಿರ್ಧಾರ ತಪ್ಪು ಎಂದಾಗುತ್ತದೆ. ತಂಡದ ನಾಯಕರಾಗಿ ಧೋನಿ ಆ ನಿರ್ಧಾರ ಮಾಡಿದ್ದರು. ಇದು ನನಗೆ ಮಾತ್ರ ಅಲ್ಲ ಮೂವರು ಆಟಗಾರರಿಗೂ ಶಾಕ್ ಆಗಿತ್ತು ಎಂದರು.
Most runs in professional cricket in INDIA: (FC + List A + T20)
24452 runs – Sachin Tendulkar
22484 runs – GAUTAM GAMBHIR
21237 runs – Rahul Dravid#RanjiTrophy #GambhirRetires
— Sampath Bandarupalli (@SampathStats) December 9, 2018
2012 ಟೂರ್ನಿಯಲ್ಲಿ ಟೀಂ ಇಂಡಿಯಾ 8 ಪಂದ್ಯಗಳನ್ನು ಆಡಿದ್ದರೆ ಅದರಲ್ಲಿ 3 ರಲ್ಲಿ ಗೆಲುವು ಹಾಗೂ ಒಂದು ಟೈ ಆಗಿತ್ತು. ಅಲ್ಲದೇ ಟೂರ್ನಿಯಲ್ಲಿ ಬೆಸ್ಟ್ 3 ಫೈನಲ್ ಪ್ರವೇಶಿಸಲು ಕೂಡ ತಂಡ ವಿಫಲವಾಗಿತ್ತು. ಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಭಾಗವಹಿಸಿತ್ತು.
ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 8 ಪಂದ್ಯಗಳಿಂದ 373 ರನ್ ಗಳಿಸಿ ಹೆಚ್ಚು ರನ್ ಹೊಡೆದಿದ್ದರೆ, ಗಂಭೀರ್ 7 ಪಂದ್ಯಗಳಿಂದ 44ರ ಸರಾಸರಿ 308 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದರು. ಉಳಿದಂತೆ 5 ಪಂದ್ಯಗಳಾಡಿದ್ದ ಸೆಹ್ವಾಗ್ ಕೇವಲ 65 ಹಾಗೂ 7 ಪಂದ್ಯಗಳಾಡಿದ್ದ ಸಚಿನ್ 143 ರನ್ ಗಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv