ಚಿಕ್ಕಮಗಳೂರು: ಧನ್ಯಶ್ರೀ ಆತ್ಮಹತ್ಯೆಯ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಬಜರಂಗದಳದ ಕಾರ್ಯಕರ್ತರು ಹರಿಬಿಟ್ಟಿರುವ ಎಚ್ಚರಿಕೆ ಮೆಸೇಜ್‍ಗಳು ಮೂಡಿಗೆರೆ ನಗರದಲ್ಲಿ ವೈರಲ್ ಆಗುತ್ತಿವೆ.
ಅನ್ಯ ಧರ್ಮದ ಯುವಕರೊಂದಿಗೆ ಸಾರ್ವಜನಿಕರ ಜೊತೆ ಕಾಣಿಸಿಕೊಂಡರ ಧರ್ಮದೇಟು ಬೀಳೋದು ಗ್ಯಾರಂಟಿ ಎಂಬ ಎಚ್ಚರಿಕೆಯ ಸಂದೇಶಗಳು ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Advertisement
Advertisement
ಮೆಸೇಜ್‍ನಲ್ಲಿ ಏನಿದೆ?: ಮೂಡಿಗೆರೆ ನಗರದ ಆಸುಪಾಸಿನ ಎಲ್ಲಾ ಹುಡುಗಿಯರಿಗೆ ಕೊನೆಯ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ. ಕಾಲೆಜಿನಲ್ಲಿ ತನ್ನ ಸಹಪಾಠಿ ಎಂಬ ಸಲುಗೆಯಿಂದ ಅನ್ಯಧರ್ಮದ ಯುವಕರೊಂದಿಗೆ ಚಕ್ಕಂದವಾಡುತ್ತಿರುವುದು ಎಲ್ಲೇ ಕಂಡರು ಅಲ್ಲಿ ನಿಮ್ಮ ಮಾತಿಗೆ ಅವಕಾಶ ಕೊಡದೇ ಧರ್ಮದೇಟು ಗ್ಯಾರಂಟಿ. ನಮಗೆ ಹಿಂದೂ ಧರ್ಮ ಮುಖ್ಯ ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ.
#ಧರ್ಮೋ ರಕ್ಷತಿ ರಕ್ಷಿತಃ#
* ಮೂಡಿಗೆರೆ ಬಜರಂಗದಳ
Advertisement
ಬೇರೆಯವರಿಗೆ ಹೇಳಲು ಇವರು ಯಾರು?
ಬೇರೆ ಮನೆಯ ಯುವತಿಯರಿಗೆ ಬೆದರಿಕೆ ಹಾಕುವುದು ತಪ್ಪಾಗುತ್ತದೆ. ಧನ್ಯಶ್ರೀ ಮನೆಗೆ ಬಂದ ಹಿಂದೂ ಯುವಕರ ಪೋಷಕರಿಗೆ ಬೆದರಿಕೆ ಹಾಕಿದ್ದಾರೆ. ಇದ್ರಿಂದ ಮನನೊಂದ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿಂದೂ ಸಂಘಟನೆ ಪರೋಕ್ಷವಾಗಿ ಧನ್ಯಶ್ರೀ ಸಾವಿಗೆ ಕಾರಣವಾಗುತ್ತದೆ. ಧನ್ಯಶ್ರೀಗೆ ಐವರು ಬೆದರಿಕೆ ಹಾಕಿದೆ ಎಂದು ಗೊತ್ತಿದ್ದರೂ, ಮೂಡಿಗೆರೆ ಪೊಲೀಸರು ಒಬ್ಬನ ಹೆಸರನ್ನು ಮಾತ್ರ ಎಫ್‍ಐಆರ್ ನಲ್ಲಿ ದಾಖಲಿಸಿದ್ದಾರೆ. ಪೊಲೀಸರು ಉಳಿದ ಪ್ರಭಾವಿ ವ್ಯಕ್ತಿಗಳ ಹೆಸರನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ಈ ಬಗ್ಗೆ ನಗರದ ಆಜಾದ್ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು. ಬೆದರಿಕೆ ಹಾಕುತ್ತಿರುವ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಲಿ. ಬೇರೆಯವರ ಮನೆಯ ಹೆಣ್ಣು ಮಕ್ಕಳಿಗೆ ಹೇಳೋರು ಇವರ್ಯಾರು? ಮುಸ್ಲಿಂ ಸಮುದಾಯದ ಹಲವು ಯುವತಿಯರು ಹಿಂದೂ ಧರ್ಮದ ಯುವಕರನ್ನು ಮದ್ವೆಯಾಗಿ ಚೆನ್ನಾಗಿದ್ದಾರೆ. ನಾವುಗಳು ಅವರಿಗೆ ಯಾವುದೇ ಬೆದರಿಕೆಯನ್ನು ಹಾಕಿಲ್ಲ ಅಂತಾ ಕೋಮು ಸೌಹಾರ್ದ ವೇದಿಕೆಯ ನಾಯಕ ಗೌಸ್ ಮೊಹಿದ್ದೀನ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
ಈ ರೀತಿ ಮೆಸೇಜ್‍ಗಳು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವೈರಲ್ ಆಗುತ್ತಿವೆ. ಈ ಸಂದೇಶದ ಬಗ್ಗೆ ಎಸ್‍ಪಿ ಅಣ್ಣಾಮಲೈ ಗಮನಕ್ಕೂ ಬಂದಿದ್ದೂ, ಮೆಸೇಜ್‍ಗಳು ಎಲ್ಲಿಂದ ಮತ್ತು ಯಾರಿಂದ ಬರುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಬಗ್ಗೆ ಯಾರು ವೈಯಕ್ತಿಕವಾಗಿ ದೂರು ದಾಖಲಿಸಿಲ್ಲ.
https://youtu.be/bFv6ywT51-Y