ಕೀವ್: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು, ಮೆಟ್ರೋ ಸುರಂಗದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಯುದ್ಧಪೀಡಿತ ಉಕ್ರೇನ್‍ನಿಂದ ವಿದ್ಯಾರ್ಥಿಗಳೇ ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. ಖಾರ್ಕೀವ್‍ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗ ವಿದ್ಯಾರ್ಥಿಗಳು ತಮ್ಮ ನೋವು ತೋಡಿಕೊಂಡಿದ್ದಾರೆ.
ರಕ್ಷಣೆ ಇದ್ದರೂ ಕೂಡಾ ನಾವು ಭಯಬೀತರಾಗಿದ್ದೇವೆ. ನಮಗೆ ಇಲ್ಲಿ ಆಹಾರ, ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಏನು ಮಾಡುತ್ತಿದೆ ಅಂತ ನಮಗಾರಿಗೂ ಗೊತ್ತಾಗುತ್ತಿಲ್ಲ. ಮೆಟ್ರೋ ಅಂಡರ್ ಗ್ರೌಂಡ್ ಬಂಕರ್‌ನಲ್ಲಿ ಊಟ, ನೀರು, ಆಹಾರ ಸಮಸ್ಯೆಯ ಜೊತೆಗೆ ಟೆಂಪ್ರೇಚರ್ ಸಮಸ್ಯೆ ಆಗುತ್ತಿದೆ. ಮೈನಸ್2 ಡಿಗ್ರಿ ಇದೆ ಎಂದಿದ್ದಾರೆ.
Advertisement
Advertisement
ಸ್ಥಳಾಂತರ ಮಾಡುತ್ತಿದ್ದಾರೆ ಅಂತ ಗೊತ್ತಾಯ್ತು. ಆದರೆ ಪಶ್ಚಿಮ ಭಾಗದಿಂದ ಮಾಡುತ್ತಿದ್ದಾರೆ. ಯುದ್ಧ ನಡಿತಿರೋದು ಪೂರ್ವ ಭಾಗದಲ್ಲಿ. ನಮಗೆ ಸಮೀಪ ಎಂದರೆ ರಷ್ಯಾ. ನಮ್ಮನ್ನು ಇಲ್ಲಿಂದ ಹೇಗೆ ಕರೆದುಕೊಂಡು ಹೋಗುತ್ತಾರೆ ಎನ್ನುವ ಯಾವುದೇ ಮಾಹಿತಿ ಇಲ್ಲ. ಕೀವ್, ಖಾರ್ಕೀವ್ ಭಾಗದಲ್ಲಿ ಇರುವ ನೂರಾರು ವಿದ್ಯಾರ್ಥಿಗಳು. ಕೀವ್ ಮತ್ತು ಖಾರ್ಕೀವ್‌ನಿಂದ ಪಶ್ಚಿಮ ಭಾಗದ ಸ್ಥಳಾಂತರಕ್ಕೆ ಹೋಗಲು. 1500 ಕಿಮೀ ಅಂತರ ಇದೆ. ವಾಹನ ವ್ಯವಸ್ಥೆ ಇಲ್ಲ. ನಡೆದುಕೊಂಡು ಹೋಗಲು ಆಗಲ್ಲ. ಹೀಗಾಗಿ ನಾವು ಅಲ್ಲಿಗೆ ಹೋಗಲು ಆಗಲ್ಲ. ಅವರೇ (ಭಾರತ ಸರ್ಕಾರ) ಬಂದು ಕರೆದುಕೊಂಡು ಹೋಗಬೇಕು ಎಂದಿದ್ದಾರೆ. ಇದನ್ನೂ ಓದಿ: ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!
Advertisement
Advertisement
ತುಂಬಾ ತೊಂದರೆಯಲ್ಲಿ ಇರುವ ಪೂರ್ವಭಾಗದ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಸರ್ಕಾರ ಮೊದಲು ಆದ್ಯತೆ ಕೊಡಬೇಕು. ಮೂರು ದಿನಗಳಿಂದ ನಿದ್ದೆ ಮಾಡಲು ಆಗಿಲ್ಲ. ಬರೀ ಬಾಂಬ್ ಸದ್ದು ಕೇಳುತ್ತಿದೆ. ಮೆಟ್ರೋ ಬಿಟ್ಟು ಹೊರಗೆ ಹೋಗಲು ಆಗುತ್ತಿಲ್ಲ. ಮೆಟ್ರೋದಲ್ಲಿ ಯಾವ ಕ್ಷಣದಲ್ಲಿ ಏನು ಆಗುತ್ತೋ ತಿಳಿತಿಲ್ಲ. ಮಹಿಳೆಯರಿಗೂ ರಕ್ಷಣೆ ಇಲ್ಲವಾಗಿದೆ. ಮೆಟ್ರೋದಲ್ಲಿ ಬಹಳ ಕಠಿಣ ಪರಿಸ್ಥಿತಿ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ, ನನ್ನ ಬಗ್ಗೆ ಯೋಚಿಸ್ಬೇಡಿ- ಯೋಧನ ಭಾವುಕ ವೀಡಿಯೋ ವೈರಲ್
ಸರ್ಕಾರ ಮತ್ತು ಮಾಧ್ಯಮಗಳ ಎದುರು ನಮ್ಮ ಕಷ್ಟ ಹೇಳಿಕೊಳ್ತಿದ್ದೇವೆ. ಮೂರು ದಿನಗಳ ವರೆಗೂ ಪೂರ್ವ ಭಾಗದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಇರುವ ನಮಗೆ ಯಾವುದೇ ಸಹಾಯ ಆಗಿಲ್ಲ. ಕಠಿಣ ಸ್ಥಿತಿಯಲ್ಲಿ ಇರುವ ಕೀವ್, ಖಾರ್ಕೀವ್ ಪ್ರದೇಶದ ವಿದ್ಯಾರ್ಥಿಗಳನ್ನ ಸ್ಥಳಾಂತರ ಮಾಡಲು ಸರ್ಕಾರಕ್ಕೆ ಆಗ್ರಹಿಸಿರುವ ವಿದ್ಯಾರ್ಥಿಗಳು ಹೇಳಿದ್ದಾರೆ.