ಕಾರವಾರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಹಿಂದೂಗಳ ಹತ್ಯೆ ಬೆನ್ನಲ್ಲೇ ಕೇಂದ್ರ ಸರ್ಕಾರ ಮಿಲಿಟರಿ ಆಪರೇಷನ್‌ಗೆ ಸಿದ್ಧತೆ ಮಾಡಿಕೊಂಡಿದೆ.
ಕಾರವಾರದ ಕದಂಬ ನೌಕಾ ನೆಲೆಯಲ್ಲಿ (Karwar Kadamba Naval Base) ಹೈಯಸ್ಟ್ ಸ್ಟೇಟ್ ಆಫ್ ರೆಡಿನಸ್ ಅಲರ್ಟ್ (ರೆಡ್ ಅಲರ್ಟ್) ನೀಡಲಾಗಿದ್ದು, ನೌಕಾ ನೆಲೆ ಸಿಬ್ಬಂದಿಗಳಿಗೆ ರಜೆಯನ್ನು ಮೊಟಕುಗೊಳಿಸಲಾಗಿದೆ. ಯುದ್ಧ ಹಡಗುಗಳು ಹಾಗೂ ಸಬ್ ಮೆರಿನ್‌ಗಳು ಪಾಕಿಸ್ತಾನದ ಗಡಿಗೆ ತೆರಳಲು ಸಿದ್ಧವಾಗಿವೆ. ಕಾರವಾರ ನೌಕಾ ನೆಲೆಯಲ್ಲಿ ಐಎನ್‌ಎಸ್ ವಿಕ್ರಾಂತ್ ಹಾಗೂ ಐಎನ್‌ಎಸ್ ವಿಶಾಕ ಪಟ್ಟಣಮ್ ಸಬ್ ಮೆರಿನ್‌ಗಳಾದ ಕಾಂಡೇರಿ, ಕರಂಜ್‌ಗಳು ಸಿದ್ಧವಾಗಿವೆ. ಇದನ್ನೂ ಓದಿ: ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ
ಅರಬ್ಬೀ ಸಮುದ್ರದ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಡಿಗೆ ತೆರಳಲು ಸನ್ನದ್ಧವಾಗಿದ್ದು, ಫ್ಲಾಗ್ ಆಫೀಸರ್‌ಗಳ ಸೂಚನೆಗೆ ಕಾಯುತ್ತಿವೆ. ಇನ್ನು ಕಾರವಾರ ಕದಂಬ ನೌಕಾನೆಲೆಯೇ ಬೇಸ್ ಮಾಡಿಕೊಂಡಿರುವ ವಿಶ್ವದ ಅತೀ ದೊಡ್ಡ ಏರ್ ಕ್ರಾಪ್ಟ ನೌಕೆ ಎಂಬ ಹೆಸರು ಪಡೆದಿರುವ ಐಎನ್‌ಎಸ್ ವಿಕ್ರಮಾದಿತ್ಯ ಹಡಗು ಕೊಚ್ಚಿಯ ರಿಪೇರಿ ಯಾರ್ಡ್‌ನಲ್ಲಿದ್ದು ಯದ್ಧಕ್ಕೆ ತೆರಳಲು ಸಿದ್ಧಪಡಿಸಲಾಗುತ್ತಿದೆ. ಮೇ ಮೊದಲ ವಾರದಲ್ಲಿ ಅರಬ್ಬೀ ಸಮುದ್ರದ ಗಡಿಗೆ ತೆರಳಲಿದೆ.
ಸದ್ಯ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಐಎನ್‌ಎಸ್ ಸುಭದ್ರ, ಐಎನ್‌ಎಸ್ ಜ್ಯೋತಿ, ಐಎನ್‌ಎಸ್ ವಿಶಾಕಪಟ್ಟಣಂ, ಸಬ್ ಮೆರಿನ್‌ಗಳಾದ ಕಾಂಡೇರಿ, ಕರಂಜ್‌ಗಳು ಅರಬ್ಬೀ ಸಮುದ್ರದ ಪಂಜಾಬ್ ಪ್ರಾಂತ್ಯದ ಗಡಿ ಭಾಗಕ್ಕೆ ತೆರಳಲು ಅಣಿಯಾಗಿದೆ. ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ