ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಸಮಸ್ಯೆ ಹಾಗೂ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಟಿಬೆಟಿಯನ್ ಗುರು ದಲೈ ಲಾಮಾ ಸಲಹೆ ನೀಡಿದರು.
ಈ ಬಗ್ಗೆ ಟ್ವೀಟ್ ಮಾಡಿದ ಅವರು ಉಕ್ರೇನ್‍ನಲ್ಲಿನ ಸಂಘರ್ಷದಿಂದ ತುಂಬಾ ಬೇಸರವಾಗಿದೆ. ನಮ್ಮ ಪ್ರಪಂಚವು ಪರಸ್ಪರ ಅವಲಂಬಿತವಾಗಿದೆ. ಆದರೆ ಎರಡು ದೇಶಗಳ ನಡುವಿನ ಹಿಂಸಾತ್ಮಕ ಸಂಘರ್ಷವು ಅನಿವಾರ್ಯವಾಗಿ ಉಳಿದ ದೇಶಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಯುದ್ಧವು ಹಳೆದಾಗಿದ್ದು, ಅಹಿಂಸೆಯೊಂದೇ ಏಕೈಕ ಮಾರ್ಗವಾಗಿದೆ. ಇತರರನ್ನು ಸಹೋದರ, ಸಹೋದರಿಯರಂತೆ ಪರಿಗಣಿಸುವ ಮೂಲಕ ನಾವು ಏಕತೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
Advertisement
Hope for Dialogue to Restore Peace in Ukraine https://t.co/DWec3mGHzK
— Dalai Lama (@DalaiLama) February 28, 2022
Advertisement
ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಉತ್ತಮವಾಗಿ ಪರಿಹರಿಸಲಾಗುತ್ತದೆ. ಪರಸ್ಪರ ತಿಳುವಳಿಕೆ ಮತ್ತು ಯೋಗಕ್ಷೇಮವನ್ನು ಗೌರವಿಸದರೆ ಮಾತ್ರ ನಿಜವಾದ ಶಾಂತಿ ಸಿಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ
Advertisement
Advertisement
ಉಕ್ರೇನ್‍ನಲ್ಲಿ ಶಾಂತಿ ಶೀಘ್ರದಲ್ಲಿ ಮರುಸ್ಥಾಪಿಸಲಿ ಎಂದ ಅವರು, ನಾವು ಈ ಬಗ್ಗೆ ಭರವಸೆ ಕಳೆದುಕೊಳ್ಳಬಾರದು. 20ನೇ ಶತಮಾನವು ಯುದ್ಧ ಮತ್ತು ರಕ್ತಪಾತದ ಶತಮಾನವಾಗಿತ್ತು. ಆದರೆ 21ನೇ ಶತಮಾನವು ಸಂಭಾಷಣೆಯ ಶತಮಾನವಾಗಿರಬೇಕು ಎಂದರು. ಇದನ್ನೂ ಓದಿ: ಯುದ್ಧ ಭೂಮಿಯಿಂದ ಇನ್ನೂ ಬಾರದ ಮಗಳ ನೆನೆದೆ ಇಡೀ ಕುಟುಂಬ ಕಣ್ಣೀರು