ಟೆಹ್ರಾನ್: ಇರಾನ್‌ನ ಮಶಾದ್ ವಿಮಾನ ನಿಲ್ದಾಣದ (Mashhad Airport) ಮೇಲೆ ಅಮೆರಿಕ ನಡೆಸಿದ ವಾಯುದಾಳಿಯಿಂದ (US Airstrike) ಭಾರತಕ್ಕೆ ತೆರಳಬೇಕಿದ್ದ ʻಮಹಾನ್ ಏರ್ʼ ವಿಮಾನ ತೀವ್ರ ಹಾನಿಗೊಳಗಾಗಿದೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಇದನ್ನು ಅಮೆರಿಕದ ʻಯುದ್ಧಾಪರಾಧʼ ಎಂದು ಕರೆದಿದೆ.
ಅಮೆರಿಕ ದಾಳಿಯಿಂದ ಮಾನವೀಯ ನೆರವು (humanitarian aid) ಸಂಗ್ರಹಿಸಲು ಭಾರತಕ್ಕೆ ತೆರಳುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಲ್ಲದೇ ಇದು ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದನ್ನೂ ಓದಿ: ಇರಾನ್ ಮೇಲೆ ಪರಮಾಣು ದಾಳಿಗೆ ಸಿದ್ಧತೆ: ವಿಶ್ವಸಂಸ್ಥೆಯ ರಾಜತಾಂತ್ರಿಕ ರಾಜೀನಾಮೆ

ವರದಿಗಳ ಪ್ರಕಾರ, ಮಶಾದ್ ಏರ್‌ಪೋರ್ಟ್ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಮಹಾನ್ ಏರ್ (Mahan Air) ವಾಯುಯಾನ ಸಂಸ್ಥೆಗೆ ಸೇರಿದ ವಿಮಾನಕ್ಕೆ ಹಾನಿಯಾಗಿದೆ. ಈ ವಿಮಾನವು ಔಷಧಗಳು, ಪರಿಹಾರ ಸಾಮಗ್ರಿಗಳು ಸೇರಿದಂತೆ ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ (ದೆಹಲಿಗೆ) ಹಾರಲು ನಿಗದಿಯಾಗಿತ್ತು. ಅಷ್ಟರಲ್ಲೇ ಅಮೆರಿಕ ದಾಳಿಗೆ ತುತ್ತಾಗಿದ್ದು, ನೆರವು ಸಂಗ್ರಹ ಕಾರ್ಯಾಚರಣೆಗೂ ಅಡ್ಡಿಯಾಗಿದೆ.
ಭಾರತದಲ್ಲಿನ ಇರಾನ್ ರಾಯಭಾರ ಕಚೇರಿಯು ಈ ದಾಳಿಯನ್ನು ಅಮೆರಿಕದ ಯುದ್ಧಾಪರಾಧ ಎಂದು ಕರೆದಿದೆ. ಆದ್ರೆ ಅಮೆರಿಕದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ ಸಾವು ನೋವು ಸಂಭವಿಸಿದೆಯೇ? ಅನ್ನೋದ್ರ ಬಗ್ಗೆಯೂ ವಿವರಗಳು ಸ್ಪಷ್ಟವಾಗಿಲ್ಲ.

ಮಾರ್ಚ್ ತಿಂಗಳ ಆರಂಭದಲ್ಲೂ ಭಾರತ ಇರಾನ್‌ಗೆ ಮಾನವೀಯ ನೆರವು ನೀಡಿತ್ತು. ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ ನೆರವು ಸ್ವೀಕರಿಸಿತ್ತು. ಇದನ್ನೂ ಓದಿ: ಆರ್ಟೆಮಿಸ್-2 ಪಯಣಕ್ಕೆ ಕೌಂಟ್‌ಡೌನ್ – ಉಡಾವಣೆಗೂ ಮುನ್ನ ಸೂರ್ಯನ ಮೇಲೆ ನಾಸಾ ಕಣ್ಣಿಟ್ಟಿದ್ದು ಯಾಕೆ? ಮಿಷನ್ ಉದ್ದೇಶ ಏನು?

